Adcode

ಧರ್ಮ ವಿಚಾರಗಳು

ಪಕ್ಷಗಳು  ಪಂಚಗವ್ಯಗಳು ಸಪ್ತ ಪುರಿಗಳು
1 ಕೃಷ್ಣ ಪಕ್ಷ  1 ತುಪ್ಪ 1 ಅಯೋಧ್ಯಾ ಪುರಿ
2 ಶುಕ್ಲ ಪಕ್ಷ 2 ಹಾಲು 2 ಮಥುರಾ ಪುರಿ
ಋಣತ್ರಯಗಳು 3 ಮೊಸರು 3 ಮಾಯಾ ಪುರಿ (ಹರಿದ್ವಾರ)
1 ದೇವ ಋಣ 4 ಗೋಮೂತ್ರ 4 ಕಾಶಿ
2 ಪಿತೃ ಋಣ 5 ಗೋಮಯ 5 ಕಂಚಿ (ವಿಷ್ಣು ಕಂಚಿ)
3 ಋಷಿ ಋಣ ಪಂಚದೇವರು 6 ಅವಂತಿಕ ಪುರಿ
ಪಂಚತತ್ವಗಳು 1 ಗಣೇಶ 7 ದ್ವಾರಕಾ ಪುರಿ
1 ಪ್ರಥ್ವಿ 2 ವಿಷ್ಣು ಅಷ್ಟಾಂಗ ಯೋಗಗಳು
2 ಜಲ 3 ಶಿವ 1 ಯಮ
3 ಅಗ್ನಿ 4 ದೇವಿ 2 ನಿಯಮ
4 ವಾಯು 5 ಸೂರ್ಯ 3 ಆಸನ
5 ಆಕಾಶ ಚತುರ್ಯುಗಗಳು 4 ಪ್ರಾಣಾಯಾಮ
ಚತುರ್ಧಾಮಗಳು 1 ಸತ್ಯಯುಗ 5 ಪ್ರತ್ಯಾಹಾರ
1 ದ್ವಾರಕಾ 2 ತ್ರೇತಾಯುಗ 6 ಧಾರಣಾ
2 ಬದರೀನಾಥ 3 ದ್ವಾಪರಯುಗ 7 ಧ್ಯಾನ
3 ಜಗನ್ನಾಥಪುರಿ 4 ಕಲಿಯುಗ 8 ಸಮಾಧಿ
4 ರಾಮೇಶ್ವರ ಚತುರ್ವೇದಗಳು ಅಷ್ಟ ಲಕ್ಷ್ಮೀ
ಶಕ್ತಿಪೀಠಗಳು 1 ಋಗ್ವೇದ 1 ಆದಿ ಲಕ್ಷ್ಮೀ
1 ಶಾರದಾ ಪೀಠ 2 ಯಜುರ್ವೇದ 2 ವಿಧ್ಯಾ ಲಕ್ಷ್ಮೀ
2 ಜ್ಯೋತಿಷ ಪೀಠ (ಜೋಷಿಮಠ) 3 ಸಾಮವೇದ 3 ಸೌಭಾಗ್ಯ ಲಕ್ಷ್ಮೀ
3 ಗೋವರ್ಧನ ಪೀಠ (ಜಗನ್ನಾಥಪುರಿ) 4 ಅಥರ್ವಣ ವೇದ 4 ಅಮೃತ ಲಕ್ಷ್ಮೀ
4 ಶೃಂಗೇರಿ ಪೀಠ ಚತುರಾಶ್ರಮಗಳು 5 ಕಾಮ ಲಕ್ಷ್ಮೀ
ಅಂತಃಕರಣಗಳು 1 ಬ್ರಹ್ಮಚರ್ಯ 6 ಸತ್ಯ ಲಕ್ಷ್ಮೀ
1 ಮನಸ್ಸು 2 ಗೃಹಸ್ಥ 7 ಭೋಗ ಲಕ್ಷ್ಮೀ
2 ಬುದ್ಧಿ 3 ವಾನಪ್ರಸ್ತ 8 ಯೋಗ ಲಕ್ಷ್ಮೀ
3 ಚಿತ್ತ 4 ಸನ್ಯಾಸ ನವ ದುರ್ಗಾ
4 ಅಹಂಕಾರ ದರ್ಶನಗಳು 1 ಶೈಲಪುತ್ರಿ
ದಶ ದಿಕ್ಕುಗಳು 1 ವೈಶೇಷಿಕ 2 ಬ್ರಹ್ಮಚಾರಿಣಿ
1 ಪೂರ್ವ 2 ನ್ಯಾಯ 3 ಚಂದ್ರಘಂಟಾ
2 ಪಶ್ಚಿಮ 3 ಸಾಂಖ್ಯ 4 ಕೂಷ್ಮಾಂಡಾ
3 ಉತ್ತರ 4 ಯೋಗ 5 ಸ್ಕಂದಮಾತಾ
4 ದಕ್ಷಿಣ 5 ಪೂರ್ವ ಮೀಮಾಂಸ 6 ಕಾತ್ಯಾಯಿನೀ
5 ಈಶಾನ್ಯ 6 ದಕ್ಷಿಣ ಮೀಮಾಂಸ 7 ಕಾಲರಾತ್ರಿ
6 ನೈರುತ್ಯ ಸಪ್ತರ್ಷಿಗಳು 8 ಮಹಾಗೌರಿ
7 ವಾಯವ್ಯ 1 ವಿಶಾಮಿತ್ರ 9 ಸಿದ್ದಿಧಾತ್ರಿ
8 ಆಗ್ನೇಯ 2 ಜಮದಗ್ನಿ ಮಾಸಗಳು
9 ಆಕಾಶ 3 ಭರದ್ವಾಜ 1 ಚೈತ್ರ
10 ಪಾತಾಳ 4 ಗೌತಮ 2 ವೈಶಾಖ
ರಾಶಿಗಳು 5 ಅತ್ರಿ 3 ಜ್ಯೇಷ್ಠ
1 ಮೇಷ 6 ವಶಿಷ್ಟ 4 ಆಷಾಡ
2 ವೃಷಭ 7 ಕಶ್ಯಪ 5 ಶ್ರಾವಣ
3 ಮಿಥುನ ದಶಾವತಾರಗಳು 6 ಭಾದ್ರಪದ
4 ಕಟಕ 1 ಮತ್ಸ್ಯ 7 ಆಶ್ವೀನ
5 ಸಿಂಹ 2 ಕೂರ್ಮ 8 ಕಾರ್ತಿಕ
6 ಕನ್ಯಾ 3 ವರಾಹ 9 ಮೃಗಶಿರ
7 ತುಲ 4 ನೃಸಿಂಹ 10 ಪೌಷ
8 ವೃಶ್ಚಿಕ 5 ವಾಮನ 11 ಮಾಘ
9 ಧನು 6 ಪರಶುರಾಮ 12 ಫಾಲ್ಗುಣ
10 ಮಖರ 7 ಶ್ರೀರಾಮ ತಿಥಿಗಳು
11 ಕುಂಭ 8 ಕೃಷ್ಣ 1 ಪ್ರತಿಪದ್
12 ಮೀನ 9 ಭಲರಾಮ 2 ದ್ವಿತೀಯಾ
ಸ್ಮೃತಿಗಳು 10 ಕಲ್ಕಿ 3 ತೃತಿಯಾ
1 ಮನುಸ್ಮೃತಿ ಜ್ಯೋತಿರ್ಲಿಂಗಗಳು 4 ಚತುರ್ಥಿ
2 ವಿಷ್ಣುಸ್ಮೃತಿ 1 ಸೋಮನಾಥ 5 ಪಂಚಮಿ
3 ಅತ್ರಿಸ್ಮೃತಿ 2 ಮಲ್ಲಿಕಾರ್ಜುನ 6 ಷಷ್ಠಿ
4 ಹಾರಿತಸ್ಮೃತಿ 3 ಮಹಾಕಾಲ 7 ಸಪ್ತಮಿ
5 ಯಾಜ್ಞವಲ್ಕ್ಯಸ್ಮೃತಿ 4 ಓಂಕಾರೇಶ್ವರ 8 ಅಷ್ಟಮಿ
6 ಉಶನಸ್ಮೃತಿ 5 ವೈಧ್ಯನಾಥ 9 ನವಮಿ
7 ಅಂಗೀರಸ್ಮೃತಿ 6 ರಾಮೇಶ್ವರ 10 ದಶಮಿ
8 ಯಮಸ್ಮೃತಿ 7 ವಿಶ್ವನಾಥ 11 ಏಕಾದಶಿ
9 ಆಪಸ್ಥಂಬಸ್ಮೃತಿ 8 ತ್ರಯಂಭಕೇಶ್ವರ 12 ದ್ವಾದಶಿ
10 ಸರ್ವತಸ್ಮೃತಿ 9 ಕೇದಾರನಾಥ 13 ತ್ರಯೋದಶಿ
11 ಕಾತ್ಯಾಯನಸ್ಮೃತಿ 10 ಗುಷ್ಮೇಶ್ವರ 14 ಚತುರ್ದಶಿ
12 ಭೃಹಸ್ಪತಿಸ್ಮೃತಿ 11 ಭೀಮಶಂಕರ 15 ಪೂರ್ಣಿಮಾ/ಅಮಾವಾಸ್ಯೆ
13 ಪರಾಶರಸ್ಮೃತಿ 12 ನಾಗೇಶ್ವರ
14 ವ್ಯಾಸಸ್ಮೃತಿ
15 ಸಾಂಖ್ಯಸ್ಮೃತಿ
16 ಲಿಖಿತಸ್ಮೃತಿ
17 ದಕ್ಷಸ್ಮೃತಿ
18 ಶಾತಾತಪಸ್ಮೃತಿ
19 ವಶಿಷ್ಟಸ್ಮೃತಿ

ರಾಹುವಿನ ಪ್ರಭಾವ 6ನೇ ಮನೆಯಲ್ಲಿ

ರಾಹು 6ನೇ ಮನೆಯಲ್ಲಿ ಇದ್ದಾಗ ಉದ್ಯೋಗಸಂಬಂಧಿಸಿದ ಪ್ರಭಾವವನ್ನು ತೋರಿಸುತ್ತಾನೆ. ಅಂತಹ ವ್ಯಕ್ತಿಗಳು ಉದ್ಯೋಗವನ್ನು 2-3 ಅಥವಾ ಹೆಚ್ಚು ಬಾರಿ ಬದಲಾಯಿಸುತ್ತಾರೆ. ಇವರಿಗೆ ಉದ್ಯೋಗದಲ್ಲಿ ತೃಪ್ತಿ ಇರುವುದಿಲ್ಲ. ಇವರು ಸರ್ಕಾರದಿಂದ ದಂಡ ವಿಧಿಸಲ್ಪಟ್ಟಿರುತ್ತಾರೆ ಮತ್ತು ಉದ್ಯೋಗ ಸಂಬಂದಿ ಕೋರ್ಟಿಗೆ ಅಲೆದಾಡುತ್ತಾರೆ. ಇವರು ಉದ್ಯೋಗದಲ್ಲಿ ತಮ್ಮ ಔಪಚಾರಿಕ ವಿದ್ಯೆಯನ್ನು ಉಪಯೋಗಿಸುವುದಿಲ್ಲ. ಅಂದರೆ ಇವರು ಉದ್ಯೋಗದಲ್ಲಿ ಔಪಚಾರಿಕ ವಿದ್ಯೆಯನ್ನು ಉಪಯೋಗಿಸದಿದ್ದರೆ ಯಶಸ್ಸು ಸಾಧಿಸುತ್ತಾರೆ. ಇಂತಹ ವ್ಯಕ್ತಿಗಳು ತಮಗೆ ಆಸಕ್ತಿ ಇರುವ ಉದ್ಯೋಗವನ್ನೇ ಆಯ್ಕೆ ಮಾಡಬೇಕು ಆಗಲೇ ಯಶಸ್ಸು ಸಾಧಿಸುತ್ತಾರೆ.
ವೈದ್ಯಕೀಯ ಜ್ಯೋತಿಷ್ಯ
ಯಾರಿಗಾದರೂ ರಾಹು 6ನೇ ಮನೆಯಲ್ಲಿದ್ದರೆ ಅವರಿಗೆ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳಿರುತ್ತವೆ ಮತ್ತು ಆಗಾಗ ಒಂದಕ್ಕಿಂತ ಹೆಚ್ಚು ವೈದ್ಯರಿಂದ ತಪಾಸಣೆಗೊಳಗಾಗುತ್ತಾರೆ. ಏಕೆಂದರೆ ಒಬ್ಬ ವೈದ್ಯರು ಮೊದಲ ಬೇಟಿಯಲ್ಲಿ ಅವರ ಸಮಸ್ಯೆಯನ್ನು ಸರಿಯಾಗಿ ತಿಳಿಯಲು ಅಸಮರ್ಥರಾಗಿರುತ್ತಾರೆ ಮತ್ತು ಅಸಮರ್ಪಕ ಚಿಕಿತ್ಸೆಯ ಸಾಧ್ಯತೆಗಳಿವೆ. ಹೀಗಾಗಿ ಆ ವ್ಯಕ್ತಿಯು ಚಿಕಿತ್ಸೆ ಪಡೆಯುವ ಮೊದಲು ಇನ್ನೊಂದು ವೈದ್ಯರ ಸಲಹೆ ಪಡೆಯುವ ಅಗತ್ಯವಿದೆ ಮತ್ತು ಚಿಕಿತ್ಸೆಯು ವರ್ಷಗಳ ವರೆಗೆ ಮುಂದುವರಿಯಬಹುದು. ಅವರು ತಮ್ಮ ಔಷದಿಯ ಅಂತಿಮ ದಿನಾಂಕವನ್ನು ದೃಡಪಡಿಸಿಕೊಳ್ಳಬೇಕು. ಪ್ರಯೋಗಾಲಯದಲ್ಲಿ ಪರೀಕ್ಷೆ ಮತ್ತು ಎಕ್ಸರೇ ಪರೀಕ್ಷೆ ಸಮಯದಲ್ಲಿ ತಮ್ಮ ಹೆಸರನ್ನು ಸರಿಯಾಗಿ ಪರಿಶೀಲಿಸಬೇಕು.
ತಮ್ಮ ಜಾತಕವನ್ನು ಪರಿಶೀಲಿಸಿ ಅದರಲ್ಲಿ ರಾಹು 6ನೇ ಮನೆಯಲ್ಲಿದ್ದರೆ ವಿಶೇಷ ಕಾಳಜಿವಹಿಸಬೇಕು. ನಿಮ್ಮ ಒಂದು ಕಾಳಜಿಯಿಂದ ನಿಮ್ಮ ಅಮೂಲ್ಯವಾದ ಜೀವನವನ್ನು, ಸಮಯವನ್ನು ಮತ್ತು ಹಣವನ್ನು ಉಳಿಸಬಹುದು.

- ಎಸ್ ಶರ್ಮ ವಶಿಷ್ಠ

ಮಗಳ ಮತ್ತು ಸಹೋದರಿಯರ ವೈವಾಹಿಕ ಸಮಸ್ಯೆಗಳಿಗೆ ಪರಿಹಾರಗಳು

ನಾವು ನೋಡಿರುವಂತೆ ಪೋಷಕರು ಮಗಳ ಮದುವೆ ನಿಶ್ಚಯಿಸಿದ ನಂತರ ಹಣದ ಸಮಸ್ಯೆ, ಮಗಳ ಮತ್ತು ಭಾವಿ ಪತಿಯ ಮಧ್ಯೆ ಹೊಂದಾಣಿಕೆಯ ಕೊರತೆ, ಕೆಲಸ/ವ್ಯವಹಾರಗಳಲ್ಲಿ ತೊಂದರೆ ಮತ್ತು ಕುಟುಂಬದ ಸದಸ್ಯರ ಆರೋಗ್ಯದಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಬರುತ್ತವೆ. ಇವುಗಳಿಗೆ ಸುಲಭ ಪರಿಹಾರ ಹೀಗಿದೆ.
ಮದುವೆ ನಿಶ್ಚಯವಾದ ನಂತರ ಪಾಲಕರು ಈ ಪರಿಹಾರಗಳನ್ನು ಮಾಡಬೇಕು.

·         ಪಾಲಕರು ಗೋಶಾಲೆಗೆ ಸ್ವಲ್ಪ ಹಣವನ್ನು ದಾನವಾಗಿ ನೀಡಬೇಕು.
·         9 ವರ್ಷದೊಳಗಿನ ಹುಡುಗಿಯರಿಗೆ(ಕನ್ನಿಕ ದೇವಿ) ಪಾಲಕರು ಸ್ವಲ್ಪ ಹಣವನ್ನು ದಾನವಾಗಿ ನೀಡಬೇಕು.
·         ಮದುವೆ ನಿಶ್ಚಯವಾದ ಹುಡುಗಿಯು ಬೆಳಗ್ಗಿನ ಹೊತ್ತು ಅರಶಿನಹುಡಿ ಬೆರೆಸಿದ ಹಾಲನ್ನು ಕುಡಿಯಬೇಕು.
·         ಮದುವೆಯನ್ನು ದೇವಸ್ಥಾನಗಳಲ್ಲಿ ಮಾಡಬೇಕು, ಛತ್ರಗಳಲ್ಲಿ ರಿಸೆಪ್ಶನ್ ಮಾಡಬೇಕು. ಇದರಿಂದ ಗ್ರಹಗಳ ಕೆಟ್ಟ ಪರಿಣಾಮ ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ಹಿಂದೂಗಳು ಈ ನಿಯಮವನ್ನು ಪಾಲಿಸುವುದಿಲ್ಲ, ಆದರೆ ಸಿಖ್ ಜನರು ಅವರ ಮದುವೆಯನ್ನು ಕಡ್ಡಾಯವಾಗಿ ಗುರುದ್ವಾರಗಳಲ್ಲಿ ಮಾಡುತ್ತಾರೆ, ನಂತರ ಛತ್ರಗಳಲ್ಲಿ ಭೋಜನ ಮಾಡುತ್ತಾರೆ. ಇದು ಸುಲಭ ಮತ್ತು ಪರಿಣಾಮಕಾರಿ ಪರಿಹಾರ.
·         ಹುಡುಗಿಯು ನೀಲಿ ಮತ್ತು ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
·         ಹುಡುಗಿಯು ತೆಂಗಿನಕಾಯಿಯನ್ನು ತಿನ್ನಬಾರದು ಆದರೆ ಯಳನೀರನ್ನು ಕುಡಿಯಬಹುದು.

- ಎಸ್ ಶರ್ಮ ವಶಿಷ್ಠ

ನವರಾತ್ರಿ ವಿಶೇಷ

ನವರಾತ್ರಿ ದುರ್ಗಾ ಮಾತೆಯ 9 ದಿನಗಳ ಆಚರಣೆಯಾಗಿದೆ. ಆದರೆ ಈ 9 ದಿನಗಳಿಗೂ ವಿಶೇಷವಾದ ಕಥೆಯಿದೆ.
ಉದಾಹರಣೆಗೆ ನಾವು ಹೇಳುವುದು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ.
ಆದರೆ ಆದುನಿಕ ವಿಜ್ಞಾನದ ಪ್ರಕಾರ ಇದು ನ್ಯುಟ್ರಾನು, ಪ್ರೋಟಾನು ಮತ್ತು ಎಲಕ್ಟ್ರಾನು.
ಎರಡರ ಪ್ರಕಾರವೂ ಒಂದು ಸೃಷ್ಟಿಕರ್ತ, ಒಂದು ಸ್ಥಿತಿಕರ್ತ ಮತ್ತು ಒಂದು ಲಯಕರ್ತ.
ಇದೆ ಪ್ರಕಾರವಾಗಿ ನಾವು ನವರಾತ್ರಿಯ ನಿಜವಾದ ಅರ್ಥವನ್ನು ತಿಳಿಯಬೇಕು.

ಉದಾಹರಣೆಗೆ ನವರಾತ್ರಿಯ 5ನೇ ದಿನ ಸ್ಕಂದ ಮಾತೆಯ ದಿನವಾಗಿದೆ. ಸ್ಕಂದ ಮಾತೆಯು ಕಾರ್ತಿಕನ ತಾಯಿಯಾಗಿದ್ದಾಳೆ. ಕಾರ್ತಿಕೇಯನ ಕಥೆ ಹೀಗಿದೆ: ಪರಶಿವನ ವೀರ್ಯವನ್ನು ಮೊದಲು ಅಗ್ನಿದೇವನು ಸಾಗಿಸುತ್ತಾನೆ. ನಂತರ ವಾಯುದೇವನು ಸಾಗಿಸುತ್ತಾನೆ. ನಂತರ ಗಂಗಾ ಮಾತೆಯು ಸಾಗಿಸುತ್ತಾಳೆ. ನಂತರ 6 ಋಷಿ ಸ್ತ್ರೀಯರಿಗೆ ವರ್ಗಾಯಿಸಲ್ಪಡುತ್ತದೆ. ಪುನಃ ಗಂಗಾ ಮಾತೆಗೆ ವರ್ಗಾಯಿಸಲ್ಪಡುತ್ತದೆ. ನಂತರ ಭೂ ಮಾತೆಗೆ ವರ್ಗಾಯಿಸಲ್ಪಡುತ್ತದೆ.
ಇದು ಇಂದಿನ ನಮ್ಮ ಆಧುನಿಕ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಮಾಡುವ ಪ್ರನಾಳ ಶಿಶುವಿನಂತೆ ಇದೆ. ಬಹುಶ ನಮ್ಮ ಋಷಿಮುನಿಗಳು ಈ ಪ್ರನಾಳ ಶಿಶುವಿನ ವಿಧಾನವನ್ನು ಆಸಕ್ತಿದಾಯಕವಾಗಿ ಹೀಗೆ ತಿಳಿಸಿರಬಹುದು. ಇದೆ ರೀತಿ ನವರಾತ್ರಿಯ 9 ದಿನಗಳಲ್ಲೂ ಸಹಾ ಇದೇ ರೀತಿ ರಹಸ್ಯಗಳಿರಬಹುದು.

ನಮ್ಮ ಸರ್ಕಾರದಿಂದ ನಮ್ಮ ವೇದ ಪುರಾಣಗಳ ಸಂಶೋದನೆಯ ಕಾರ್ಯ ಆಗಬೇಕಿದೆ. ನಾಸಾ ಸಂಸ್ಥೆಯು ಸಂಸ್ಕೃತದ ಮೇಲೆ ಸಂಶೋಧನೆ ಮಾಡಿ ಗಣಕಯಂತ್ರಕ್ಕೆ ಇದು ಅತ್ಯುತ್ತಮ ಎಂದು ಕಂಡುಕೊಂಡಿದೆ ಮತ್ತು ರಾಮಾಯಣ ಮಹಾಭಾರತಗಳ ಮೇಲೆ ಸಂಶೋಧನೆ ಮಾಡಿ ಅತ್ಯಾಧುನಿಕ ಯುದ್ಧಉಪಕರಣಗಳನ್ನು ಕಂಡುಹಿಡಿದಿದೆ. ಹೀಗಾಗಿ ನಮ್ಮ ಸರ್ಕಾರ ಸಹಾ ಈ ಹಾದಿಯಲ್ಲಿ ಮುಂದುವರಿಯಬೇಕಿದೆ. ಕೆಲವು ಟಿವಿ ಮಾಧ್ಯಮಗಳು ಸಮುದ್ರ, ಹಾವುಗಳು, ಮೀನುಗಳು ಇತ್ಯಾದಿಗಳ ಮೇಲೆ ಸಂಶೋಧನೆ ಮಾಡುತ್ತಿವೆ. ಆದರೆ ಅವು ಹಿಂದೂ ಧರ್ಮದ ಮೇಲೆ ಹಸುವಿನ ಉಪಯೋಗದ ಮೇಲೆ ಸಂಶೋಧನೆ ಮಾಡಬೇಕಿದೆ.

- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯದಲ್ಲಿ ಸುಲಭ ಪರಿಹಾರಗಳು 2

ವಿವಾಹೇತರ ಸಂಬಂಧಗಳಿಗೆ ಪರಿಹಾರ:
ನೆಲವನ್ನು ಸ್ವಚ್ಚಗೊಳಿಸುವಾಗ ದೇಸಿ ತಳಿಯ ಹಸುವಿನ ಮೂತ್ರ ಸಿಂಪಡಿಸಿ ಸ್ವಚ್ಚಗೊಳಿಸಬೇಕು, ವಿಶೇಷವಾಗಿ ಮಲಗುವ ಕೋಣೆಗೆ. ಇದು ಅತಿ ಸುಲಭ ಮತ್ತು ಪರಿಣಾಮಕಾರಿ ಪರಿಹಾರ.
ಗೃಹ ನಿರ್ಮಾಣದಲ್ಲಿ ಪರಿಹಾರ:
ಸಾಮಾನ್ಯವಾಗಿ ಯಾರಾದರೂ ಮನೆಯನ್ನು ಕಟ್ಟಿದಾಗ ಅಥವಾ ನಿವೇಶನಗಳನ್ನು ಕೊಂಡಾಗ ಈ ಕೆಳಗಿನ ಘಟನೆಗಳು ಜರುಗಬಹುದು.
·         ನಿರ್ಮಾಣ ಕೆಲಸ ಅರ್ಧಕ್ಕೆ ನಿಲ್ಲಬಹುದು.
·         ಹತ್ತಿರದ ಸಂಬಂಧಿಗಳ ಮರಣ ಸಂಭವಿಸಬಹುದು.
·         ಕೆಲಸಗಾರರ ಸಮಸ್ಯೆ ಎದುರಾಗಬಹುದು.
·         ಉದ್ಯೋಗ ವ್ಯವಹಾರಗಳಲ್ಲಿ ಹಾನಿಯಾಗಬಹುದು.
·         ಆರೋಗ್ಯದ ಸಮಸ್ಯೆ ಎದುರಾಗಬಹುದು.
ಇವೆಲ್ಲವೂ ಸಹಾ ಬಹಳ ದೊಡ್ಡ ಸಮಸ್ಯೆಗಳಾಗಿರಬಹುದು ಆದರೆ ಪರಿಹಾರ ಸುಲಭವಾಗಿದೆ.
·         ಗೃಹ ನಿರ್ಮಾಣ ಕಾರ್ಯ ಆರಂಬಿಸುವ ಮೊದಲು ಗೋಶಾಲೆಗೆ ಸ್ವಲ್ಪ ಧನವನ್ನು ನೀಡಿ.
·         ಗೃಹ ನಿರ್ಮಾಣ ಕಾರ್ಯ ಆರಂಬಿಸಿದ ನಂತರ ಪ್ರತೀ ಬಾರಿ ನಿರ್ಮಾಣಸ್ಥಳಕ್ಕೆ ಬೇಟಿ ಕೊಡುವಾಗ ಅಲ್ಲಿ ಸಿಗುವ ಹಸು/ನಾಯಿಗಳಿಗಾಗಿ ರೊಟ್ಟಿ, ಬ್ರೆಡ್ ಮತ್ತು ಬಿಸ್ಕೇಟುಗಳನ್ನು ತೆಗೆದುಕೊಂಡು ಹೋಗಿ.
·         ಇದು ಅತಿ ಸುಲಭ ಮತ್ತು ಪರಿಣಾಮಕಾರಿ ಪರಿಹಾರ.
ಷೇರುಮಾರುಕಟ್ಟೆ ಮತ್ತು ವ್ಯಾಪಾರಿಗಳಿಗೆ ಪರಿಹಾರ:
ಯಾವಾಗಲೂ ನಿಮ್ಮ ಸಹೋದರಿಯರು ಮತ್ತು ಅವರ ತಂದೆ ತಾಯಿಯರೊಂದಿಗೆ, ಚಿಕ್ಕಮ್ಮ/ಚಿಕ್ಕಪ್ಪರೊಂದಿಗೆ ಮತ್ತು 9ವರ್ಷ ವಯಸ್ಸಿನ ಒಳಗಿನ ಹುಡುಗಿಯರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ.
ಈ ತರಹದ 2 ಅಥವಾ ಹೆಚ್ಚು ಸಂಬಂಧಿಗಳು ಅವರ ಮನೆಯಲ್ಲಿ ಆರಾಮವಾಗಿ ಇಲ್ಲದಿದ್ದರೆ ನಿಮಗೆ ಶೇರು ಮಾರುಕಟ್ಟೆ ವ್ಯವಹಾರ ಸೂಕ್ತವಾದುದ್ದಲ್ಲ. ಇದು ಅತಿ ಸುಲಭ ಮತ್ತು ಪರಿಣಾಮಕಾರಿ ಪರಿಹಾರ.

- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ವಾಸ್ತು ಮತ್ತು ಬಣ್ಣಗಳು

ಸಾಮಾನ್ಯವಾಗಿ ನಾವು ವಾಸ್ತುವಿನ ಬಗ್ಗೆ ಆಲೋಚಿಸುವಾಗ ಮೆಟ್ಟಿಲುಗಳ ಸ್ಥಾನ, ಶೌಚಾಲಯ ಮತ್ತು ಮುಖ್ಯದ್ವಾರ ಇತ್ಯಾದಿಗಳ ಬಾಗ್ಗೆ ಚರ್ಚಿಸುತ್ತೇವೆ. ಆದರೆ ನಾವು ಮನೆಯ ವರ್ಣ ಸಂಯೋಜನೆಯ ಬಗ್ಗೆ ಆಲೋಚಿಸುವುದಿಲ್ಲ. ವಾಸ್ತುವಿನಲ್ಲಿ ಬಣ್ಣಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಮನೆಯ ವಾಸ್ತು ಚೆನ್ನಾಗಿದ್ದರೂ ಸಹಾ ಬಣ್ಣಗಳು ಅದರ ಪರಿಣಾಮ ಬೀರಬಹುದು.
ವಿವಿಧ ದಿಕ್ಕುಗಳಲ್ಲಿನ ಬಣ್ಣಗಳ ಋಣಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ.
1.       ಪಶ್ಚಿಮ ದಿಕ್ಕಿನಲ್ಲಿ ಕಿತ್ತಳೆ ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಜನನಾಂಗಗಳಲ್ಲಿ ಸಮಸ್ಯೆ ಇರುತ್ತದೆ. 
ಪುರುಷ ಸದಸ್ಯರಿಗೆ : ಸರ್ಕಾರಿ ಕಛೇರಿಗಳಿಂದ ಸಮಸ್ಯೆ ಉಂಟಾಗುತ್ತದೆ, ಉದಾಹರಣೆಗೆ ಕೋರ್ಟು/ಕೇಸುಗಳು, ಆದಾಯತೆರಿಗೆ, ವಿದ್ಯುತ್ ಕಳ್ಳತನ ವ್ಯಾಜ್ಯ ಇತ್ಯಾದಿ.
2.       ಉತ್ತರ ದಿಕ್ಕಿನಲ್ಲಿ ಕೆಂಪು/ಕಂದು ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಕುಟುಂಬದಲ್ಲಿ ತಾಯಿಯ ಆರೋಗ್ಯ ಹದಗೆಡುತ್ತದೆ. ಹೃದಯ ಸಂಬಂದಿಸಿದ ಕಾಯಿಲೆ ಉಂಟಾಗುತ್ತದೆ. ಸಹೋದರಿಯರಿಗೆ ಸಹೋದರರ ಸಹಾಯ ಕಡಿಮೆ ಇರುತ್ತದೆ.
ಪುರುಷ ಸದಸ್ಯರಿಗೆ : ಮುಂಗೋಪದ ವ್ಯಕ್ತಿಗಳಾಗಿರುತ್ತಾರೆ ಮತ್ತು ಶೀಘ್ರ ಕೋಪಗೊಳ್ಳುತ್ತಾರೆ. ಜಗಳವಾಡಲು ಸದಾ ಸಿದ್ದರಿರುತ್ತಾರೆ. ಸಹೋದರರೊಂದಿಗೆ ಮನಸ್ತಾಪ ಇರುತ್ತದೆ. ರಕ್ತ ಸಂಬಂದಿಸಿದ ಕಾಯಿಲೆ ಇರುತ್ತದೆ.
3.       ದಕ್ಷಿಣ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಆರೋಗ್ಯ ಮತ್ತು ಗೌರವ ಹಾನಿ. ಹಿರಿಯ ಮಹಿಳೆಯರು ಅತಿಯಾಗಿ ಧಾರ್ಮಿಕರಾಗುತ್ತಾರೆ.
ಪುರುಷ ಸದಸ್ಯರಿಗೆ : ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಗಂಡು ಮಗುವಿನ ಜನನದಲ್ಲಿ ವಿಳಂಬ, ತೊಂದರೆಗಳು ಉಂಟಾಗಬಹುದು. ವ್ಯವಹಾರದಲ್ಲಿ ತೊಂದರೆ ಸಂಪತ್ತಿನ ನಾಶ ಉಂಟಾಗುತ್ತದೆ.
4.       ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಸ್ತ್ರೀಯರು ಅತಿಯಾದ ಮಾತುಗಾರರಾಗಿರುತ್ತಾರೆ.
ಪುರುಷ ಸದಸ್ಯರಿಗೆ : ಶೇರು ಮಾರುಕಟ್ಟೆ, ಲಾಟರಿ ಮತ್ತು ಊಹಾತ್ಮಕ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ.

- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ಮತ್ತು ಸ್ತ್ರೀಯರ ಉಡುಪುಗಳು

ಸ್ತ್ರೀಯರು ಧರಿಸುವ ಉಡುಪುಗಳು ಮತ್ತು ಅವರ ಜೀವನಕ್ಕೆ ಆಶ್ಚರ್ಯಕರವಾದ ಸಂಬಂಧವಿದೆ. ಸ್ತ್ರೀಯರು ಧರಿಸುವ ಉಡುಪುಗಳು ಅವರ ಜೀವನದಲ್ಲಿ ಹೇಗೆ ಪರಿಣಾಮ ಭೀರುತ್ತದೆ ಎಂಬುದನ್ನು ತಿಳಿಯಿರಿ.
ಹುಡುಗಿಯರ ಪೋಷಕರು ಈ ಕೆಳಗಿನ ವರ್ಣ ಸಂಯೋಜನೆಗಳಿಗೆ ಅಪ್ಪಣೆ ಕೊಡಬಾರದು.
·         ಗುಲಾಬಿ/ತಿಳಿಬಣ್ಣದ ಜೊತೆಗೆ ನೀಲಿಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಈ ವರ್ಣ ಸಂಯೋಜನೆಯಿಂದ ಹುಡುಗಿಯರ ನಡತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕೆಟ್ಟ ಹೆಸರನ್ನು ತರಬಹುದು, ವಿಶೇಷವಾಗಿ ಹುಡುಗರಿಂದ.
·          ಗುಲಾಬಿ/ತಿಳಿಬಣ್ಣದ ಜೊತೆಗೆ ಬೂದು/ಕಿತ್ತಳೆಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಜನನಾಂಗಗಳ ತೊಂದರೆ ಮತ್ತು ಮುಟ್ಟಿನ ತೊಂದರೆ ಉಂಟಾಗುತ್ತದೆ.
·          ಗುಲಾಬಿ/ತಿಳಿಬಣ್ಣದ ಜೊತೆಗೆ ಕೆಂಪು/ಮರೂನ್ ಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಹುಡುಗರ ಜೊತೆಗೆ ದೈಹಿಕ ಸಂಬಂಧದ ಆಕರ್ಷಣೆ/ಆಸಕ್ತಿ/ ಬೆಳವಣಿಗೆ/ಕೋರಿಕೆಗಳು ಉಂಟಾಗುತ್ತದೆ.
·         ಹುಡುಗಿಯರು ನೀಲಿ ಮತ್ತು ಬೂದುಬಣ್ಣವನ್ನು ಸಂಪೂರ್ಣವಾಗಿ ವರ್ಜಿಸಿದರೆ ಉತ್ತಮ. ಆದರೆ ಈಗಿನ ಕಾಲದಲ್ಲಿ ನೀಲಿಬಣ್ಣದ ಜೀನ್ಸ್ ಬಟ್ಟೆಗಳನ್ನು ಬಿಡುವುದು ಹುಡುಗಿಯರಿಗೆ ಕಷ್ಟ ಹೀಗಾಗಿ ಗಾಢ ನೀಲಿಯ ಬದಲು ತಿಳಿನೀಲಿ ಬಣ್ಣದ  ಜೀನ್ಸ್ ಬಟ್ಟೆಗಳನ್ನು ದರಿಸುವುದು ಉತ್ತಮ.
·         ಹುಡುಗಿಯರ ಕೊಠಡಿಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ಈ ಬಣ್ಣಗಳನ್ನು ವರ್ಜಿಸಿ.

- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ – ವಿಶೇಷ ಸಂಯೋಜನೆಗಳು

ನಮಗೆ ಜ್ಯೋತಿಷಿಗಳ ಸಲಹೆ ಬೇಕೋ ಬೇಡವೋ ಎಂದು ಸಂಖ್ಯಾಶಾಸ್ತ್ರದ ಮೂಲಕ ತಿಳಿಯುವ ವಿಧಾನ.
ಇದನ್ನು ನಾವು ನಮ್ಮ ಜನ್ಮ ದಿನದ ಮೂಲಕ ತಿಳಿಯಬಹುದು.
ಉದಾಹರಣೆಗೆ ನಮ್ಮ ಜನ್ಮದಿನಾಂಕ 28-03-1957 ಎಂದುಕೊಳ್ಳೋಣ.
ಈ ಜನ್ಮ ದಿನದ ಸಂಖ್ಯೆಗಳನ್ನು ಕೂಡಿಸಿ ಒಂದು ಸಂಖ್ಯೆ ಮಾಡಿ: 28= 2+8= 10 =1+0=1
ಜನ್ಮ ದಿನದ ಸಂಖ್ಯೆ = 1
ಈ ಜನ್ಮ ದಿನದ ಸಂಖ್ಯೆಗೆ ಸಂಪೂರ್ಣ ಜನ್ಮ ದಿನಗಳನ್ನು ಸೇರಿಸಿ, ಆಗ ಸಂಪೂರ್ಣ ಜನ್ಮ ದಿನ ಸಂಖ್ಯೆ ಸಿಗುತ್ತದೆ.
ð  1+೦+3+1+9+5+7=26=2+6=8
ಸಂಪೂರ್ಣ ಜನ್ಮ ದಿನ ಸಂಖ್ಯೆ = 8.
ಸಂಖ್ಯೆ 1 ಸೂರ್ಯನನ್ನು ಪ್ರತಿನಿಧಿಸುತ್ತದೆ. ಸಂಖ್ಯೆ 8 ಶನಿಯನ್ನು ಪ್ರತಿನಿಧಿಸುತ್ತದೆ.
ಈ ಗ್ರಹಗಳು ಒಂದಕ್ಕೊಂದು ವಿರೋಧಿಗಳಾಗಿವೆ.
ಈ ಸಂಖ್ಯೆಗಳ ಸಂಯೋಜನೆಯಿಂದ ಜೀವನದಲ್ಲಿ ಹೋರಾಟ, ಸಮಸ್ಯೆಗಳು ಮತ್ತು ಅಡಚಣೆಗಳಿರುತ್ತವೆ.
ಹೀಗಾಗಿ ಈ ತರಹದ ಸಂಖ್ಯಾ ಸಂಯೋಜನೆಯ ಜನ್ಮದಿನಾಂಕ ಇರುವ ಜನರಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು  ಜ್ಯೋತಿಷ್ಯರ ಸಲಹೆ ಬೇಕಾಗಿರುತ್ತದೆ.
ಈಗ ನೀವೇ ನಿಮ್ಮ ಜನ್ಮ ದಿನದ ಸಂಖ್ಯೆ ಮತ್ತು ಸಂಪೂರ್ಣ ಜನ್ಮ ದಿನ ಸಂಖ್ಯೆಗಳನ್ನು ಕಂಡುಕೊಳ್ಳಿ.
ಸಂಖ್ಯೆಗಳು ಮತ್ತು ಅವುಗಳ ಪ್ರತಿನಿಧಿ ಗ್ರಹಗಳ ಪಟ್ಟಿ
1 ಸೂರ್ಯ
2 ಚಂದ್ರ
3 ಗುರು
4 ರಾಹು
5 ಬುಧ
6 ಶುಕ್ರ
7 ಕೇತು
8 ಶನಿ
9 ಮಂಗಳ

ಜ್ಯೋತಿಷ್ಯರ ಸಲಹೆ ಬೇಕಾಗಿರುವ ಸಂಖ್ಯಾ ಸಂಯೋಜನೆಯ ಪಟ್ಟಿ
1-4,     1-7,      1-8
2-4,     2-7,     2-8
3-5,     3-6
4-1,     4-2,     4-4,    4-7,     4-9
5-3,     5-9
6-3,     6-4,     6-7
7-1,      7-2,     7-4,     7-6,     7-7
8-1,     8-2,     8-8,     8-9
9-4,     9-5,     9-8

ಈ ಮೇಲಿನ ಸಂಖ್ಯಾ ಸಂಯೋಜನೆಯು ಯಾರಲ್ಲಾದರೂ ಇದ್ದರೆ ಆ ವ್ಯಕ್ತಿಯು ಜೀವನದಲ್ಲಿ ಆಗಾಗ  ಸಮಸ್ಯೆಗಳಿಗೆ ಸಿಲುಕುತ್ತಾರೆ ಹೀಗಾಗಿ ಅವರಿಗೆ ಆಗಾಗ ಹಿರಿಯರ ಮತ್ತು ಜ್ಯೋತಿಷ್ಯರ ಸಲಹೆ ಸಹಕಾರ ಬೇಕಾಗುತ್ತದೆ.
ಈ ವ್ಯಕ್ತಿಗಳು ಏಕಾಂಗಿಯಾಗಿರುವಾಗ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ.

- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ - ಅತ್ಯುತ್ತಮವಾದ ಸೂಕ್ತ ಹೆಸರುಗಳು

ನಾವೆಲ್ಲರೂ ನಮ್ಮ ಜೀವನದಲ್ಲಿ ಯಶಸ್ಸು ಮತ್ತು ಸುಧಾರಣೆಗಳನ್ನು ಸಾಧಿಸಲು ಬಯಸುತ್ತೇವೆ.ಇದಕ್ಕಾಗಿ ನಾವು ರಾಶಿಹರಳುಗಳನ್ನು ಧರಿಸುತ್ತೇವೆ, ವಿಶೇಷ ಪೂಜೆಗಳನ್ನು ಮಾಡುತ್ತೇವೆ, ವಾಸ್ತು ಶಾಸ್ತ್ರ ಮತ್ತು ಮಂತ್ರ ಮುಂತಾದ ಧಾರ್ಮಿಕ ಕ್ರೀಯೆಗಳನ್ನು ಮಾಡುತ್ತೇವೆ. ನಮ್ಮ ಜನ್ಮ ವಿವರಗಳ ಪ್ರಕಾರ ಎಲ್ಲಾ ಸಕಾರಾತ್ಮಕ ಕ್ರೀಯೆಗಳನ್ನು ಮಾಡುವ ಮೂಲಕ ನಮ್ಮ ಜೀವನದಲ್ಲಿ ಸುಧಾರಣೆಯನ್ನು ತರಬಹುದು.
ಉತ್ತಮ ಜೀವನಕ್ಕಾಗಿ ನಮ್ಮ ಹೆಸರುಗಳೂ ಕೂಡ ನಮ್ಮ ಜನ್ಮ ಕುಂಡಲಿಗೆ ಅನುಸಾರವಾಗಿ ಇರಬೇಕು. ಬಹಳಷ್ಟು ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಜನನದ ನಂತರ ಜ್ಯೋತಿಷಿಗಳು ಪದೆಪದೇ ಸರಿಯಾದ ಹೆಸರನ್ನು ಸೂಚಿಸುತ್ತಾರೆ ಆದರೆ ಪಾಲಕರು ಈ ಸಲಹೆಯನ್ನು ನಿರ್ಲಕ್ಷಿಸಿ ಪ್ರಖ್ಯಾತ ಮತ್ತು ವಿಶಿಷ್ಟ ಶೈಲಿಯ ಹೆಸರುಗಳನ್ನು ಇಡುತ್ತಾರೆ.
ಈಗ ಪ್ರಶ್ನೆ ಏನೆಂದರೆ, ಜನ್ಮ ಕುಂಡಲಿ ಮತ್ತು ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರಿಟ್ಟರೆ ಏನಾಗುತ್ತದೆ?
ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಪ್ರಭಾವಲಯವಿರುತ್ತದೆ. ನಾವು ಕರೆಯುವ ಪ್ರತಿಯೊಂದು ಹೆಸರೂ ಕೂಡಾ ಕಂಪನಗಳನ್ನು ಉಂಟುಮಾಡುತ್ತವೆ. ಹೆಸರಿನ ಕಂಪನ ಮತ್ತು ದೇಹದ ಪ್ರಭಾವಲಯ ಹೊಂದಾಣಿಕೆಯಾದಲ್ಲಿ, ಆ ಹೆಸರು ಸೂಕ್ತವಾದ ಮತ್ತು  ಪ್ರಯೋಜನಕಾರಿಯಾಗಿರುತ್ತದೆ ಮತ್ತು ಜೀವನದಲ್ಲಿ ಯಶಸ್ಸನ್ನು ತರುತ್ತದೆ.  ಆದರೆ ಹೆಸರಿನ ಕಂಪನ ಮತ್ತು ದೇಹದ ಪ್ರಭಾವಲಯ ಹೊಂದಾಣಿಕೆಯಾಗದಿದ್ದಲ್ಲಿ ಆ ವ್ಯಕ್ತಿಯ ಜೀವನದಲ್ಲಿ ಹೋರಾಟ ಮತ್ತು ಅಶಾಂತಿ ತುಂಬಿರುತ್ತದೆ.
ಹೆಸರಿನ ಕಂಪನ ಮತ್ತು ದೇಹದ ಪ್ರಭಾವಲಯ ಒಂದಕ್ಕೊಂದು ವಿರೋಧವಾಗಿದ್ದರೆ ಜೀವನದಲ್ಲಿ ಅಪಘಾತಗಳು ಮತ್ತು ವಿಫಲತೆಗಳು ತುಂಬಿರುತ್ತವೆ. ಈಗ ಸಮಸ್ಯೆ ಏನೆಂದರೆ ಜನ್ಮ ಕುಂಡಲಿ ಮತ್ತು ಸಂಖ್ಯಾ ಶಾಸ್ತ್ರದ ಅನುಗುಣವಾಗಿ ಸರಿಯಾದ ಅತ್ಯುತ್ತಮವಾದ ಹೆಸರನ್ನು ಆರಿಸುವುದು. ಅದಕ್ಕೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.
1.       ನಿಮ್ಮ ಸರಿಯಾದ ಜನ್ಮ ವಿವರಗಳನ್ನು ತೆಗೆದುಕೊಳ್ಳಿ.
2.       ನಿಮ್ಮ ಜನ್ಮ ಕುಂಡಲಿಯನ್ನು ಸಿದ್ದಪಡಿಸಿ.
3.       ನಿಮ್ಮ ನಕ್ಷತ್ರ ಮತ್ತು ಪಾದವನ್ನು ತಿಳಿಯಿರಿ
4.       ಜ್ಯೋತಿಷದ ಪ್ರಕಾರ ನಿಮ್ಮ ಹೆಸರಿನ ಪಟ್ಟಿಯನ್ನು ನೋಡಿ.
5.       ಈಗ ನಿಮ್ಮ ನಕ್ಷತ್ರ ಮತ್ತು ಪಾದದ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರ ಸಿಗುತ್ತದೆ.
ಈಗ ಜ್ಯೋತಿಷ್ಯದ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರ ಸಿಕ್ಕಿದೆ. ಅದರಂತೆ ಯಾವುದಾದರೂ ಹೆಸರನ್ನು ಆರಿಸಿರಿ. ಇದು ಜನ್ಮ ಕುಂಡಲಿಯ ಪ್ರಕಾರ ಹೆಸರಿನ ಮೊದಲ ಅಕ್ಷರವನ್ನು ಕಂಡುಹಿಡಿಯುವ ಸಾಂಪ್ರದಾಯಿಕ ವಿಧಾನ.
ಈಗ ಒಂದು ಹೆಜ್ಜೆ ಮುಂದೆ ಹೋಗೋಣ.
ಈಗ ಸಂಖ್ಯಾ ಶಾಸ್ತ್ರದ ಸಹಾಯದಿಂದ, ನಮ್ಮ ಜನ್ಮ ದಿನಾಂಕ ಮತ್ತು ಮೊದಲ ಅಕ್ಷರದಂತೆ ಉತ್ತಮ ಹೆಸರನ್ನು ಆರಿಸಬಹುದು. ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ ಸಹಾಯದಿಂದ ನಾವು ಹುಟ್ಟಿದ ಮಗುವಿಗೆ ಅಥವಾ ಯಾರಿಗಾದರೂ ಉತ್ತಮವಾದ ಹೆಸರನ್ನು ಆರಿಸಬಹುದು.
ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಹೆಸರು ನಿಖರವಾಗಿದ್ದರೆ ಜೀವನವು ತುಂಬಾ ಶಾಂತಿಯುತ ಮತ್ತು ಯಶಸ್ವಿಯಾಗಿರುತ್ತದೆ. ನಿಮ್ಮ ಏನಲ್ಲ ಪರಿಶ್ರಮದ ನಂತರವೂ ಕೂಡಾ ನೀವು ಜೀವನದಲ್ಲಿ ಯಶಸ್ಸು ಸಾಧಿಸದಿದ್ದರೆ ನಿಮ್ಮ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಕಾನೂನಿನ ಪ್ರಕಾರ ನಿಮ್ಮ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಏಕೆಂದರೆ ಅದು ಕಷ್ಟಕರ ಮತ್ತು ಸುಧೀರ್ಗವಾದ ಪ್ರಕ್ರೀಯೇಯಾಗಿದೆ. ವಿಸಿಟಿಂಗ್ ಕಾರ್ಡು, ಈಮೈಲು, ನಾಮಫಲಕ ಮುಂತಾದ ದೈನಂದಿನ ವ್ಯವಹಾರಗಳಲ್ಲಿ ಹೆಸರನ್ನು ಬದಲಾಯಿಸಬೇಕು.
ಈ ವಿಧಾನದಂತೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಂತೆ ಕೆಳಗಿನ ಹೆಸರುಗಳನ್ನು ಆರಿಸಬಹುದು.
·         ವಯುಕ್ತಿಕ ಹೆಸರು
·         ಪಾಲುದಾರರ/ಸಂಗಾತಿಯ ಹೆಸರು
·         ಅಂಗಡಿಯ ಹೆಸರು
·         ಕಾರ್ಖಾನೆಯ ಹೆಸರು
·         ಮುದ್ರೆಯ ಹೆಸರು
·         ಸಿನೆಮಾ ಹೆಸರು
·         ಧಾರಾವಾಹಿಯ ಹೆಸರು.

- ಎಸ್ ಶರ್ಮ ವಶಿಷ್ಠ