ನಾವು ನೋಡಿರುವಂತೆ ಪೋಷಕರು ಮಗಳ ಮದುವೆ ನಿಶ್ಚಯಿಸಿದ
ನಂತರ ಹಣದ ಸಮಸ್ಯೆ, ಮಗಳ ಮತ್ತು ಭಾವಿ ಪತಿಯ ಮಧ್ಯೆ ಹೊಂದಾಣಿಕೆಯ ಕೊರತೆ, ಕೆಲಸ/ವ್ಯವಹಾರಗಳಲ್ಲಿ
ತೊಂದರೆ ಮತ್ತು ಕುಟುಂಬದ ಸದಸ್ಯರ ಆರೋಗ್ಯದಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ
ಬರುತ್ತವೆ. ಇವುಗಳಿಗೆ ಸುಲಭ ಪರಿಹಾರ ಹೀಗಿದೆ.
ಮದುವೆ ನಿಶ್ಚಯವಾದ ನಂತರ ಪಾಲಕರು ಈ ಪರಿಹಾರಗಳನ್ನು
ಮಾಡಬೇಕು.
·
ಪಾಲಕರು ಗೋಶಾಲೆಗೆ ಸ್ವಲ್ಪ ಹಣವನ್ನು ದಾನವಾಗಿ
ನೀಡಬೇಕು.
·
9 ವರ್ಷದೊಳಗಿನ ಹುಡುಗಿಯರಿಗೆ(ಕನ್ನಿಕ ದೇವಿ) ಪಾಲಕರು
ಸ್ವಲ್ಪ ಹಣವನ್ನು ದಾನವಾಗಿ ನೀಡಬೇಕು.
·
ಮದುವೆ ನಿಶ್ಚಯವಾದ ಹುಡುಗಿಯು ಬೆಳಗ್ಗಿನ ಹೊತ್ತು
ಅರಶಿನಹುಡಿ ಬೆರೆಸಿದ ಹಾಲನ್ನು ಕುಡಿಯಬೇಕು.
·
ಮದುವೆಯನ್ನು
ದೇವಸ್ಥಾನಗಳಲ್ಲಿ ಮಾಡಬೇಕು, ಛತ್ರಗಳಲ್ಲಿ ರಿಸೆಪ್ಶನ್ ಮಾಡಬೇಕು. ಇದರಿಂದ ಗ್ರಹಗಳ ಕೆಟ್ಟ ಪರಿಣಾಮ
ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ಹಿಂದೂಗಳು ಈ ನಿಯಮವನ್ನು ಪಾಲಿಸುವುದಿಲ್ಲ, ಆದರೆ ಸಿಖ್
ಜನರು ಅವರ ಮದುವೆಯನ್ನು ಕಡ್ಡಾಯವಾಗಿ ಗುರುದ್ವಾರಗಳಲ್ಲಿ ಮಾಡುತ್ತಾರೆ, ನಂತರ ಛತ್ರಗಳಲ್ಲಿ ಭೋಜನ
ಮಾಡುತ್ತಾರೆ. ಇದು ಸುಲಭ ಮತ್ತು ಪರಿಣಾಮಕಾರಿ ಪರಿಹಾರ.
·
ಹುಡುಗಿಯು ನೀಲಿ ಮತ್ತು ಬೂದು ಬಣ್ಣದ ಬಟ್ಟೆಗಳನ್ನು
ಧರಿಸಬಾರದು.
·
ಹುಡುಗಿಯು ತೆಂಗಿನಕಾಯಿಯನ್ನು ತಿನ್ನಬಾರದು ಆದರೆ
ಯಳನೀರನ್ನು ಕುಡಿಯಬಹುದು.
- ಎಸ್ ಶರ್ಮ ವಶಿಷ್ಠ
No comments:
Post a Comment