ನವರಾತ್ರಿ ದುರ್ಗಾ ಮಾತೆಯ 9 ದಿನಗಳ ಆಚರಣೆಯಾಗಿದೆ. ಆದರೆ ಈ 9
ದಿನಗಳಿಗೂ ವಿಶೇಷವಾದ ಕಥೆಯಿದೆ.
ಉದಾಹರಣೆಗೆ ನಾವು ಹೇಳುವುದು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ.
ಆದರೆ ಆದುನಿಕ ವಿಜ್ಞಾನದ ಪ್ರಕಾರ ಇದು ನ್ಯುಟ್ರಾನು, ಪ್ರೋಟಾನು
ಮತ್ತು ಎಲಕ್ಟ್ರಾನು.
ಎರಡರ ಪ್ರಕಾರವೂ ಒಂದು ಸೃಷ್ಟಿಕರ್ತ, ಒಂದು ಸ್ಥಿತಿಕರ್ತ ಮತ್ತು ಒಂದು
ಲಯಕರ್ತ.
ಇದೆ ಪ್ರಕಾರವಾಗಿ ನಾವು ನವರಾತ್ರಿಯ ನಿಜವಾದ ಅರ್ಥವನ್ನು ತಿಳಿಯಬೇಕು.
ಉದಾಹರಣೆಗೆ ನವರಾತ್ರಿಯ 5ನೇ ದಿನ ಸ್ಕಂದ ಮಾತೆಯ ದಿನವಾಗಿದೆ. ಸ್ಕಂದ
ಮಾತೆಯು ಕಾರ್ತಿಕನ ತಾಯಿಯಾಗಿದ್ದಾಳೆ. ಕಾರ್ತಿಕೇಯನ ಕಥೆ ಹೀಗಿದೆ: ಪರಶಿವನ ವೀರ್ಯವನ್ನು ಮೊದಲು ಅಗ್ನಿದೇವನು
ಸಾಗಿಸುತ್ತಾನೆ. ನಂತರ ವಾಯುದೇವನು ಸಾಗಿಸುತ್ತಾನೆ. ನಂತರ ಗಂಗಾ ಮಾತೆಯು ಸಾಗಿಸುತ್ತಾಳೆ. ನಂತರ
6 ಋಷಿ ಸ್ತ್ರೀಯರಿಗೆ ವರ್ಗಾಯಿಸಲ್ಪಡುತ್ತದೆ. ಪುನಃ ಗಂಗಾ ಮಾತೆಗೆ ವರ್ಗಾಯಿಸಲ್ಪಡುತ್ತದೆ. ನಂತರ
ಭೂ ಮಾತೆಗೆ ವರ್ಗಾಯಿಸಲ್ಪಡುತ್ತದೆ.
ಇದು ಇಂದಿನ ನಮ್ಮ ಆಧುನಿಕ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಮಾಡುವ
ಪ್ರನಾಳ ಶಿಶುವಿನಂತೆ ಇದೆ. ಬಹುಶ ನಮ್ಮ ಋಷಿಮುನಿಗಳು ಈ ಪ್ರನಾಳ ಶಿಶುವಿನ ವಿಧಾನವನ್ನು
ಆಸಕ್ತಿದಾಯಕವಾಗಿ ಹೀಗೆ ತಿಳಿಸಿರಬಹುದು. ಇದೆ ರೀತಿ ನವರಾತ್ರಿಯ 9 ದಿನಗಳಲ್ಲೂ ಸಹಾ ಇದೇ ರೀತಿ
ರಹಸ್ಯಗಳಿರಬಹುದು.
ನಮ್ಮ ಸರ್ಕಾರದಿಂದ ನಮ್ಮ ವೇದ ಪುರಾಣಗಳ ಸಂಶೋದನೆಯ ಕಾರ್ಯ ಆಗಬೇಕಿದೆ.
ನಾಸಾ ಸಂಸ್ಥೆಯು ಸಂಸ್ಕೃತದ ಮೇಲೆ ಸಂಶೋಧನೆ ಮಾಡಿ ಗಣಕಯಂತ್ರಕ್ಕೆ ಇದು ಅತ್ಯುತ್ತಮ ಎಂದು
ಕಂಡುಕೊಂಡಿದೆ ಮತ್ತು ರಾಮಾಯಣ ಮಹಾಭಾರತಗಳ ಮೇಲೆ ಸಂಶೋಧನೆ ಮಾಡಿ ಅತ್ಯಾಧುನಿಕ
ಯುದ್ಧಉಪಕರಣಗಳನ್ನು ಕಂಡುಹಿಡಿದಿದೆ. ಹೀಗಾಗಿ ನಮ್ಮ ಸರ್ಕಾರ ಸಹಾ ಈ ಹಾದಿಯಲ್ಲಿ
ಮುಂದುವರಿಯಬೇಕಿದೆ. ಕೆಲವು ಟಿವಿ ಮಾಧ್ಯಮಗಳು ಸಮುದ್ರ, ಹಾವುಗಳು, ಮೀನುಗಳು ಇತ್ಯಾದಿಗಳ ಮೇಲೆ
ಸಂಶೋಧನೆ ಮಾಡುತ್ತಿವೆ. ಆದರೆ ಅವು ಹಿಂದೂ ಧರ್ಮದ ಮೇಲೆ ಹಸುವಿನ ಉಪಯೋಗದ ಮೇಲೆ ಸಂಶೋಧನೆ
ಮಾಡಬೇಕಿದೆ.
- ಎಸ್ ಶರ್ಮ ವಶಿಷ್ಠ
No comments:
Post a Comment