ಬಹಳ ಜನರು ಕೈಗಳಿಂದ ತಿನ್ನುವುದು ಅನಾರೋಗ್ಯಕರ ಮತ್ತು ಅಸಹ್ಯಕರ ಎಂದು ಭಾವಿಸುತ್ತಾರೆ.ಆದರೆ ಕೈಗಳಿಂದ ಆಹಾರ ತಿನ್ನುವುದರ ಸಂಬಂಧ ಕೇವಲ ದೇಹದೊಂದಿಗೆ ಮಾತ್ರವಲ್ಲ, ಮನಸ್ಸಿನ ಮತ್ತು ಆತ್ಮದೊಂದಿಗೆ ಕೂಡ ಇದೆ.ಈಗ ಇದರ ಲಾಭಗಳನ್ನು ನೋಡೋಣ.
ನಮ್ಮ ಪ್ರಾಚೀನ ಸಂಪ್ರದಾಯದಲ್ಲಿ ಕೈಗಳಿಂದ ತಿನ್ನುವ ಅಭ್ಯಾಸ ಮುದ್ರಾ ಭಂಗಿಗಳಿಂದ ಪಡೆಯಲಾಗಿದೆ ಮತ್ತು ಇದು ಹಿಂದೂ ಧರ್ಮದ ಹಲವು ಅಂಶಗಳಲ್ಲಿ ವ್ಯಾಪಿಸಿದೆ. ನಮಗೆ ತಿಳಿದಂತೆ ಮುದ್ರೆಗಳನ್ನು ಯೋಗ ಮತ್ತು ಧ್ಯಾನಗಳಲ್ಲಿ ಬಳಸುತ್ತೇವೆ.ಹಲವು ಶಾಸ್ತ್ರೀಯ ನೃತ್ಯಗಳಲ್ಲಿ ಕೈ ಭಂಗಿಗಳು ಮುಖ್ಯವಾಗಿವೆ.
ವೈದಿಕ ಜ್ಞಾನದ ಪ್ರಕಾರ ನಮ್ಮ ಕೈ ಮತ್ತು ಕಾಲುಗಳು ಐದು ಅಂಶಗಳನ್ನು ಒಳಗೊಂಡಿದೆ, ಅವು ಆಕಾಶ, ಗಾಳಿ, ಅಗ್ನಿ, ನೀರು ಮತ್ತು ಭೂಮಿ. ಕೈಗಳಿಂದ ತಿನ್ನುವ ಅಭ್ಯಾಸವನ್ನು ಆಯುರ್ವೇದದಲ್ಲಿ ಸಹಾ ಪ್ರಸ್ತಾಪಿಸಿದ್ದಾರೆ. ಆಯುರ್ವೇದದ ಪ್ರಕಾರ ಕೈಯ ಬೆರಳುಗಳು ಪಂಚತತ್ವಗಳಲ್ಲಿ ಒಂದನ್ನು ಹೊಂದಿರುತ್ತದೆ.
ಹೆಬ್ಬೆರಳು : ಅಗ್ನಿ
ತೋರುಬೆರಳು : ವಾಯು
ಮಧ್ಯಬೆರಳು : ಆಕಾಶ
ಉಂಗುರಬೆರಳು : ಭೂಮಿ
ಕಿರಿಬೆರಳು : ನೀರು
ಮಾನವನ ಜೀರ್ಣಾಂಗ ವ್ಯವಸ್ಥೆಗೆ ಹೋಗುವ ಮೊದಲು ಆಹಾರವನ್ನು ಬೆರಳುಗಳು ಜೀರ್ಣಕಾರಿ ರೂಪಕ್ಕೆ ರೂಪಾಂತರಗೊಳಿಸುತ್ತವೆ. ಸುಧಾರಿತ ಜೀರ್ಣಕ್ರಿಯೆ ರುಚಿ ತಿನ್ನುವ ಸಂತೋಷ, ರುಚಿಯನ್ನು ಹೆಚ್ಚಿಸುತ್ತದೆ. ಕೈಗಳಿಂದ ತಿನ್ನುವುದರಿಂದ ಸುವಾಸನೆ ಮತ್ತು ಉತ್ತಮ ಭಾವನೆ ಇರುತ್ತದೆ.
ಚರ್ಮವು ಆಹಾರದ ಬಿಸಿ, ಮೃದುತ್ವದ ಬಾವವನ್ನು ಮೆದುಳಿಗೆ ಕಳಿಸುತ್ತದೆ ಮತ್ತು ಇದು ಆಹಾರ ಜೀರ್ಣಿಸುವ ಜೀರ್ಣರಸಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ.
ಕೈಯಿಂದ ತಿನ್ನುವುದರಿಂದ ಆಹಾರದ ಬಿಸಿ ಗೊತ್ತಾಗುತ್ತದೆ ಮತ್ತು ಇದರಿಂದ ಬಾಯಿ ಸುಡುವುದು ತಪ್ಪುತ್ತದೆ.
ಕೆಲವರ ನಂಬಿಕೆಯ ಪ್ರಕಾರ ಕೈಯಿಂದ ಆಹಾರ ಬಾಯಿಗೆ ಹೋಗುವಾಗ ಶುದ್ದವಾಗುತ್ತದೆ. ಇದೆ ತರಹದ ಸಂಪ್ರದಾಯವನ್ನು ಇತರ ಧರ್ಮಗಳಲ್ಲೂ ಪಾಲಿಸುತ್ತಾರೆ, ಅವರು ಊಟಕ್ಕೆ ಮೊದಲು ಕೈಯನ್ನು ಆಹಾರದ ಮೇಲೆ ಇಡುತ್ತಾರೆ.
ಇದರ ಹಿಂದಿನ ತತ್ವವೇನೆಂದರೆ ಆಹಾರದಲ್ಲಿ ಧನಾತ್ಮಕ, ಋಣಾತ್ಮಕ, ನೋವುಗಳು, ಭಾವನೆಗಳು, ಆಲೋಚನೆಗಳು ಮುಂತಾದ ಬಾಹ್ಯ ಶಕ್ತಿಗಳಿರುತ್ತದೆ. ಇವು ತರಕಾರಿ ಮಾರಾಟಗಾರರು, ಅಂಗಡಿಯವರು, ಅಡಿಗೆಯವರು ಹೀಗೆ ಹಲವರಿಂದ ಹರಿದು ಬಂದಿರುತ್ತದೆ. ಹೀಗೆ ಮನುಷ್ಯನ ಆತ್ಮಶಕ್ತಿಗೆ ಹಾನಿಯುಂಟುಮಾಡುವ ಶಕ್ತಿಗಳಿಂದ ಕೈ ಆಹಾರವನ್ನು ಶುದ್ದಿಕರಿಸುತ್ತದೆ.
ಇದೇ ತರಹದ ಅನುಭವವನ್ನು ವಿದೇಶಗಳಿಂದ ಬರುವ ಜನರು ಅನುಭವಿಸುತ್ತಾರೆ, ಅವರು ಫೋರ್ಕ್ ಮತ್ತು ಚಮಚಗಳಿಂದ ಊಟಮಾಡುವಾಗ ಉಸಿರುಗಟ್ಟುವಿಕೆ ಮತ್ತು ಋಣಾತ್ಮಕ ಬಾವನೆಗಳು ಉಂಟಾಗುತ್ತದೆ. ಅದೇ ಅವರು ಕೈಯಿಂದ ಊಟ ಮಾಡುವುದರಿಂದ ದಿವ್ಯವಾದ ಸುಂದರ ಭಾವನೆ ಬರುತ್ತದೆ.
ನಮ್ಮ ಚರ್ಮದಲ್ಲಿ ನಾರ್ಮಲ್ ಫ್ಲೋರಾ ಎನ್ನುವ ಜೀವಾಣುಗಳಿರುತ್ತವೆ. ಇವುಗಳು ಮನುಷ್ಯರಿಗೆ ಹಾನಿಕಾರಕವಲ್ಲ ಆದರೆ ಅವುಗಳು ಹೊರಜಗತ್ತಿನ ಹಾನಿಕಾರಕ ಜೀವಾಣುಗಳಿಂದ ರಕ್ಷಿಸುತ್ತದೆ.
ನಮ್ಮ ಉತ್ತಮ ಆರೋಗ್ಯಕ್ಕಾಗಿ ಬಾಯಿ, ಗಂಟಲು, ಕರಳುಗಳು ಮುಂತಾದ ದೇಹದ ಬಾಗಗಳಲ್ಲಿ ನಾರ್ಮಲ್ ಫ್ಲೋರಾ ಎನ್ನುವ ಜೀವಾಣುಗಳನ್ನು ಬೆಳೆಸುವುದು ಅಗತ್ಯವಾಗಿದೆ.
ಚಮಚಗಳಿಂದ ಊಟಮಾಡುವ ಅಭ್ಯಾಸದಿಂದ ಜೀರ್ಣಾಂಗದಲ್ಲಿ ನಾರ್ಮಲ್ ಫ್ಲೋರಾದ ವ್ಯವಸ್ಥೆ ಹಾಳಾಗಬಹುದು. ಇದರಿಂದ ಹೊರಗಿನ ಹಾನಿಕಾರಕ ಜೀವಾಣುಗಳಿಂದ ರೋಗ ನಿರೋಧಕಶಕ್ತಿ ಕಡಿಮೆಯಾಗುತ್ತದೆ.
ಉದಾಹರಣೆಗೆ ವಿದೇಶಗಳಿಂದ ಬಂದ ಜನರು ಇಲ್ಲಿ ಬಹಳ ವರ್ಷ ನೆಲೆಸಿದ ನಂತರ ಜಟರಸಂಬಂದಿ ಕಾಯಿಲೆಗಳಿಂದ ಬಳಲುತ್ತಾರೆ, ಆದರೆ ಇಲ್ಲಿನ ಜನರಿಗೆ ಆತೊಂದರೆ ಇರುವುದಿಲ್ಲ ಏಕೆಂದರೆ ಇವರ ನಾರ್ಮಲ್ ಫ್ಲೋರಾ ಸಂತುಲಿತವಾಗಿರುತ್ತದೆ.
ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||
ಅಂದರೆ ಕೈಗಳ ಮುಂದಿನ ಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು. ಈ ಶ್ಲೋಕ, ದೈವತ್ವ ನಮ್ಮ ಕೈಗಳ ಒಳಗೆ ಇರುತ್ತದೆ ಎಂಬುದನ್ನು ಸೂಚಿಸುತ್ತದೆ.
ಹಿಂದೂ ಸಂಸ್ಕೃತಿಯಲ್ಲಿನ ಅನೇಕ ವಿಷಯಗಳು ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುತ್ತದೆ,
ಆದರೆ ನಾವು ಒಮ್ಮೆ ಅದರ ಆಳಕ್ಕೆ ಇಳಿದರೆ ಆಶ್ಚರ್ಯಕರವಾದ ಅನೇಕ ವಿಷಯಗಳು ಸಿಗುತ್ತದೆ ಮತ್ತು
ವಿಶಾಲವಾದ ಜ್ಞಾನ ವೈದಿಕ ಸಂಸ್ಕೃತಿಯಲ್ಲಿ ಅಡಗಿದೆ.
No comments:
Post a Comment