Adcode

ಜ್ಯೋತಿಷ್ಯ ವಾಸ್ತು ಮತ್ತು ಬಣ್ಣಗಳು

ಸಾಮಾನ್ಯವಾಗಿ ನಾವು ವಾಸ್ತುವಿನ ಬಗ್ಗೆ ಆಲೋಚಿಸುವಾಗ ಮೆಟ್ಟಿಲುಗಳ ಸ್ಥಾನ, ಶೌಚಾಲಯ ಮತ್ತು ಮುಖ್ಯದ್ವಾರ ಇತ್ಯಾದಿಗಳ ಬಾಗ್ಗೆ ಚರ್ಚಿಸುತ್ತೇವೆ. ಆದರೆ ನಾವು ಮನೆಯ ವರ್ಣ ಸಂಯೋಜನೆಯ ಬಗ್ಗೆ ಆಲೋಚಿಸುವುದಿಲ್ಲ. ವಾಸ್ತುವಿನಲ್ಲಿ ಬಣ್ಣಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಮನೆಯ ವಾಸ್ತು ಚೆನ್ನಾಗಿದ್ದರೂ ಸಹಾ ಬಣ್ಣಗಳು ಅದರ ಪರಿಣಾಮ ಬೀರಬಹುದು.
ವಿವಿಧ ದಿಕ್ಕುಗಳಲ್ಲಿನ ಬಣ್ಣಗಳ ಋಣಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ.
1.       ಪಶ್ಚಿಮ ದಿಕ್ಕಿನಲ್ಲಿ ಕಿತ್ತಳೆ ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಜನನಾಂಗಗಳಲ್ಲಿ ಸಮಸ್ಯೆ ಇರುತ್ತದೆ. 
ಪುರುಷ ಸದಸ್ಯರಿಗೆ : ಸರ್ಕಾರಿ ಕಛೇರಿಗಳಿಂದ ಸಮಸ್ಯೆ ಉಂಟಾಗುತ್ತದೆ, ಉದಾಹರಣೆಗೆ ಕೋರ್ಟು/ಕೇಸುಗಳು, ಆದಾಯತೆರಿಗೆ, ವಿದ್ಯುತ್ ಕಳ್ಳತನ ವ್ಯಾಜ್ಯ ಇತ್ಯಾದಿ.
2.       ಉತ್ತರ ದಿಕ್ಕಿನಲ್ಲಿ ಕೆಂಪು/ಕಂದು ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಕುಟುಂಬದಲ್ಲಿ ತಾಯಿಯ ಆರೋಗ್ಯ ಹದಗೆಡುತ್ತದೆ. ಹೃದಯ ಸಂಬಂದಿಸಿದ ಕಾಯಿಲೆ ಉಂಟಾಗುತ್ತದೆ. ಸಹೋದರಿಯರಿಗೆ ಸಹೋದರರ ಸಹಾಯ ಕಡಿಮೆ ಇರುತ್ತದೆ.
ಪುರುಷ ಸದಸ್ಯರಿಗೆ : ಮುಂಗೋಪದ ವ್ಯಕ್ತಿಗಳಾಗಿರುತ್ತಾರೆ ಮತ್ತು ಶೀಘ್ರ ಕೋಪಗೊಳ್ಳುತ್ತಾರೆ. ಜಗಳವಾಡಲು ಸದಾ ಸಿದ್ದರಿರುತ್ತಾರೆ. ಸಹೋದರರೊಂದಿಗೆ ಮನಸ್ತಾಪ ಇರುತ್ತದೆ. ರಕ್ತ ಸಂಬಂದಿಸಿದ ಕಾಯಿಲೆ ಇರುತ್ತದೆ.
3.       ದಕ್ಷಿಣ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಆರೋಗ್ಯ ಮತ್ತು ಗೌರವ ಹಾನಿ. ಹಿರಿಯ ಮಹಿಳೆಯರು ಅತಿಯಾಗಿ ಧಾರ್ಮಿಕರಾಗುತ್ತಾರೆ.
ಪುರುಷ ಸದಸ್ಯರಿಗೆ : ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಗಂಡು ಮಗುವಿನ ಜನನದಲ್ಲಿ ವಿಳಂಬ, ತೊಂದರೆಗಳು ಉಂಟಾಗಬಹುದು. ವ್ಯವಹಾರದಲ್ಲಿ ತೊಂದರೆ ಸಂಪತ್ತಿನ ನಾಶ ಉಂಟಾಗುತ್ತದೆ.
4.       ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣವಿದ್ದರೆ
ಸ್ತ್ರೀ ಸದಸ್ಯರಿಗೆ : ಸ್ತ್ರೀಯರು ಅತಿಯಾದ ಮಾತುಗಾರರಾಗಿರುತ್ತಾರೆ.
ಪುರುಷ ಸದಸ್ಯರಿಗೆ : ಶೇರು ಮಾರುಕಟ್ಟೆ, ಲಾಟರಿ ಮತ್ತು ಊಹಾತ್ಮಕ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ.

- ಎಸ್ ಶರ್ಮ ವಶಿಷ್ಠ

No comments:

Post a Comment