Adcode

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ – ವಿಶೇಷ ಸಂಯೋಜನೆಗಳು

ನಮಗೆ ಜ್ಯೋತಿಷಿಗಳ ಸಲಹೆ ಬೇಕೋ ಬೇಡವೋ ಎಂದು ಸಂಖ್ಯಾಶಾಸ್ತ್ರದ ಮೂಲಕ ತಿಳಿಯುವ ವಿಧಾನ.
ಇದನ್ನು ನಾವು ನಮ್ಮ ಜನ್ಮ ದಿನದ ಮೂಲಕ ತಿಳಿಯಬಹುದು.
ಉದಾಹರಣೆಗೆ ನಮ್ಮ ಜನ್ಮದಿನಾಂಕ 28-03-1957 ಎಂದುಕೊಳ್ಳೋಣ.
ಈ ಜನ್ಮ ದಿನದ ಸಂಖ್ಯೆಗಳನ್ನು ಕೂಡಿಸಿ ಒಂದು ಸಂಖ್ಯೆ ಮಾಡಿ: 28= 2+8= 10 =1+0=1
ಜನ್ಮ ದಿನದ ಸಂಖ್ಯೆ = 1
ಈ ಜನ್ಮ ದಿನದ ಸಂಖ್ಯೆಗೆ ಸಂಪೂರ್ಣ ಜನ್ಮ ದಿನಗಳನ್ನು ಸೇರಿಸಿ, ಆಗ ಸಂಪೂರ್ಣ ಜನ್ಮ ದಿನ ಸಂಖ್ಯೆ ಸಿಗುತ್ತದೆ.
ð  1+೦+3+1+9+5+7=26=2+6=8
ಸಂಪೂರ್ಣ ಜನ್ಮ ದಿನ ಸಂಖ್ಯೆ = 8.
ಸಂಖ್ಯೆ 1 ಸೂರ್ಯನನ್ನು ಪ್ರತಿನಿಧಿಸುತ್ತದೆ. ಸಂಖ್ಯೆ 8 ಶನಿಯನ್ನು ಪ್ರತಿನಿಧಿಸುತ್ತದೆ.
ಈ ಗ್ರಹಗಳು ಒಂದಕ್ಕೊಂದು ವಿರೋಧಿಗಳಾಗಿವೆ.
ಈ ಸಂಖ್ಯೆಗಳ ಸಂಯೋಜನೆಯಿಂದ ಜೀವನದಲ್ಲಿ ಹೋರಾಟ, ಸಮಸ್ಯೆಗಳು ಮತ್ತು ಅಡಚಣೆಗಳಿರುತ್ತವೆ.
ಹೀಗಾಗಿ ಈ ತರಹದ ಸಂಖ್ಯಾ ಸಂಯೋಜನೆಯ ಜನ್ಮದಿನಾಂಕ ಇರುವ ಜನರಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು  ಜ್ಯೋತಿಷ್ಯರ ಸಲಹೆ ಬೇಕಾಗಿರುತ್ತದೆ.
ಈಗ ನೀವೇ ನಿಮ್ಮ ಜನ್ಮ ದಿನದ ಸಂಖ್ಯೆ ಮತ್ತು ಸಂಪೂರ್ಣ ಜನ್ಮ ದಿನ ಸಂಖ್ಯೆಗಳನ್ನು ಕಂಡುಕೊಳ್ಳಿ.
ಸಂಖ್ಯೆಗಳು ಮತ್ತು ಅವುಗಳ ಪ್ರತಿನಿಧಿ ಗ್ರಹಗಳ ಪಟ್ಟಿ
1 ಸೂರ್ಯ
2 ಚಂದ್ರ
3 ಗುರು
4 ರಾಹು
5 ಬುಧ
6 ಶುಕ್ರ
7 ಕೇತು
8 ಶನಿ
9 ಮಂಗಳ

ಜ್ಯೋತಿಷ್ಯರ ಸಲಹೆ ಬೇಕಾಗಿರುವ ಸಂಖ್ಯಾ ಸಂಯೋಜನೆಯ ಪಟ್ಟಿ
1-4,     1-7,      1-8
2-4,     2-7,     2-8
3-5,     3-6
4-1,     4-2,     4-4,    4-7,     4-9
5-3,     5-9
6-3,     6-4,     6-7
7-1,      7-2,     7-4,     7-6,     7-7
8-1,     8-2,     8-8,     8-9
9-4,     9-5,     9-8

ಈ ಮೇಲಿನ ಸಂಖ್ಯಾ ಸಂಯೋಜನೆಯು ಯಾರಲ್ಲಾದರೂ ಇದ್ದರೆ ಆ ವ್ಯಕ್ತಿಯು ಜೀವನದಲ್ಲಿ ಆಗಾಗ  ಸಮಸ್ಯೆಗಳಿಗೆ ಸಿಲುಕುತ್ತಾರೆ ಹೀಗಾಗಿ ಅವರಿಗೆ ಆಗಾಗ ಹಿರಿಯರ ಮತ್ತು ಜ್ಯೋತಿಷ್ಯರ ಸಲಹೆ ಸಹಕಾರ ಬೇಕಾಗುತ್ತದೆ.
ಈ ವ್ಯಕ್ತಿಗಳು ಏಕಾಂಗಿಯಾಗಿರುವಾಗ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ.

- ಎಸ್ ಶರ್ಮ ವಶಿಷ್ಠ

No comments:

Post a Comment