ನಾವೆಲ್ಲರೂ ನಮ್ಮ ಜೀವನದಲ್ಲಿ ಯಶಸ್ಸು ಮತ್ತು
ಸುಧಾರಣೆಗಳನ್ನು ಸಾಧಿಸಲು ಬಯಸುತ್ತೇವೆ.ಇದಕ್ಕಾಗಿ ನಾವು ರಾಶಿಹರಳುಗಳನ್ನು ಧರಿಸುತ್ತೇವೆ,
ವಿಶೇಷ ಪೂಜೆಗಳನ್ನು ಮಾಡುತ್ತೇವೆ, ವಾಸ್ತು ಶಾಸ್ತ್ರ ಮತ್ತು ಮಂತ್ರ ಮುಂತಾದ ಧಾರ್ಮಿಕ ಕ್ರೀಯೆಗಳನ್ನು
ಮಾಡುತ್ತೇವೆ. ನಮ್ಮ ಜನ್ಮ ವಿವರಗಳ ಪ್ರಕಾರ ಎಲ್ಲಾ ಸಕಾರಾತ್ಮಕ ಕ್ರೀಯೆಗಳನ್ನು ಮಾಡುವ ಮೂಲಕ
ನಮ್ಮ ಜೀವನದಲ್ಲಿ ಸುಧಾರಣೆಯನ್ನು ತರಬಹುದು.
ಉತ್ತಮ ಜೀವನಕ್ಕಾಗಿ ನಮ್ಮ ಹೆಸರುಗಳೂ ಕೂಡ ನಮ್ಮ ಜನ್ಮ
ಕುಂಡಲಿಗೆ ಅನುಸಾರವಾಗಿ ಇರಬೇಕು. ಬಹಳಷ್ಟು ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಜನನದ
ನಂತರ ಜ್ಯೋತಿಷಿಗಳು ಪದೆಪದೇ ಸರಿಯಾದ ಹೆಸರನ್ನು ಸೂಚಿಸುತ್ತಾರೆ ಆದರೆ ಪಾಲಕರು ಈ ಸಲಹೆಯನ್ನು
ನಿರ್ಲಕ್ಷಿಸಿ ಪ್ರಖ್ಯಾತ ಮತ್ತು ವಿಶಿಷ್ಟ ಶೈಲಿಯ ಹೆಸರುಗಳನ್ನು ಇಡುತ್ತಾರೆ.
ಈಗ ಪ್ರಶ್ನೆ ಏನೆಂದರೆ, ಜನ್ಮ ಕುಂಡಲಿ ಮತ್ತು ಸಂಖ್ಯಾ
ಶಾಸ್ತ್ರದ ಪ್ರಕಾರ ಹೆಸರಿಟ್ಟರೆ ಏನಾಗುತ್ತದೆ?
ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಪ್ರಭಾವಲಯವಿರುತ್ತದೆ.
ನಾವು ಕರೆಯುವ ಪ್ರತಿಯೊಂದು ಹೆಸರೂ ಕೂಡಾ ಕಂಪನಗಳನ್ನು ಉಂಟುಮಾಡುತ್ತವೆ. ಹೆಸರಿನ ಕಂಪನ ಮತ್ತು
ದೇಹದ ಪ್ರಭಾವಲಯ ಹೊಂದಾಣಿಕೆಯಾದಲ್ಲಿ, ಆ ಹೆಸರು ಸೂಕ್ತವಾದ ಮತ್ತು ಪ್ರಯೋಜನಕಾರಿಯಾಗಿರುತ್ತದೆ ಮತ್ತು ಜೀವನದಲ್ಲಿ
ಯಶಸ್ಸನ್ನು ತರುತ್ತದೆ. ಆದರೆ ಹೆಸರಿನ ಕಂಪನ
ಮತ್ತು ದೇಹದ ಪ್ರಭಾವಲಯ ಹೊಂದಾಣಿಕೆಯಾಗದಿದ್ದಲ್ಲಿ ಆ ವ್ಯಕ್ತಿಯ ಜೀವನದಲ್ಲಿ ಹೋರಾಟ ಮತ್ತು
ಅಶಾಂತಿ ತುಂಬಿರುತ್ತದೆ.
ಹೆಸರಿನ ಕಂಪನ ಮತ್ತು ದೇಹದ ಪ್ರಭಾವಲಯ ಒಂದಕ್ಕೊಂದು
ವಿರೋಧವಾಗಿದ್ದರೆ ಜೀವನದಲ್ಲಿ ಅಪಘಾತಗಳು ಮತ್ತು ವಿಫಲತೆಗಳು ತುಂಬಿರುತ್ತವೆ. ಈಗ ಸಮಸ್ಯೆ
ಏನೆಂದರೆ ಜನ್ಮ ಕುಂಡಲಿ ಮತ್ತು ಸಂಖ್ಯಾ ಶಾಸ್ತ್ರದ ಅನುಗುಣವಾಗಿ ಸರಿಯಾದ ಅತ್ಯುತ್ತಮವಾದ
ಹೆಸರನ್ನು ಆರಿಸುವುದು. ಅದಕ್ಕೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.
1.
ನಿಮ್ಮ ಸರಿಯಾದ ಜನ್ಮ ವಿವರಗಳನ್ನು ತೆಗೆದುಕೊಳ್ಳಿ.
2.
ನಿಮ್ಮ ಜನ್ಮ ಕುಂಡಲಿಯನ್ನು ಸಿದ್ದಪಡಿಸಿ.
3.
ನಿಮ್ಮ ನಕ್ಷತ್ರ ಮತ್ತು ಪಾದವನ್ನು ತಿಳಿಯಿರಿ
4.
ಜ್ಯೋತಿಷದ ಪ್ರಕಾರ ನಿಮ್ಮ ಹೆಸರಿನ ಪಟ್ಟಿಯನ್ನು ನೋಡಿ.
5.
ಈಗ ನಿಮ್ಮ ನಕ್ಷತ್ರ ಮತ್ತು ಪಾದದ ಪ್ರಕಾರ ನಿಮ್ಮ
ಹೆಸರಿನ ಮೊದಲ ಅಕ್ಷರ ಸಿಗುತ್ತದೆ.
ಈಗ ಜ್ಯೋತಿಷ್ಯದ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರ
ಸಿಕ್ಕಿದೆ. ಅದರಂತೆ ಯಾವುದಾದರೂ ಹೆಸರನ್ನು ಆರಿಸಿರಿ. ಇದು ಜನ್ಮ ಕುಂಡಲಿಯ ಪ್ರಕಾರ ಹೆಸರಿನ
ಮೊದಲ ಅಕ್ಷರವನ್ನು ಕಂಡುಹಿಡಿಯುವ ಸಾಂಪ್ರದಾಯಿಕ ವಿಧಾನ.
ಈಗ ಒಂದು ಹೆಜ್ಜೆ ಮುಂದೆ ಹೋಗೋಣ.
ಈಗ ಸಂಖ್ಯಾ ಶಾಸ್ತ್ರದ ಸಹಾಯದಿಂದ, ನಮ್ಮ ಜನ್ಮ ದಿನಾಂಕ
ಮತ್ತು ಮೊದಲ ಅಕ್ಷರದಂತೆ ಉತ್ತಮ ಹೆಸರನ್ನು ಆರಿಸಬಹುದು. ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ
ಸಹಾಯದಿಂದ ನಾವು ಹುಟ್ಟಿದ ಮಗುವಿಗೆ ಅಥವಾ ಯಾರಿಗಾದರೂ ಉತ್ತಮವಾದ ಹೆಸರನ್ನು ಆರಿಸಬಹುದು.
ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಹೆಸರು
ನಿಖರವಾಗಿದ್ದರೆ ಜೀವನವು ತುಂಬಾ ಶಾಂತಿಯುತ ಮತ್ತು ಯಶಸ್ವಿಯಾಗಿರುತ್ತದೆ. ನಿಮ್ಮ ಏನಲ್ಲ
ಪರಿಶ್ರಮದ ನಂತರವೂ ಕೂಡಾ ನೀವು ಜೀವನದಲ್ಲಿ ಯಶಸ್ಸು ಸಾಧಿಸದಿದ್ದರೆ ನಿಮ್ಮ ಹೆಸರನ್ನು
ಬದಲಾಯಿಸಬೇಕಾಗುತ್ತದೆ. ಕಾನೂನಿನ ಪ್ರಕಾರ ನಿಮ್ಮ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಏಕೆಂದರೆ ಅದು
ಕಷ್ಟಕರ ಮತ್ತು ಸುಧೀರ್ಗವಾದ ಪ್ರಕ್ರೀಯೇಯಾಗಿದೆ. ವಿಸಿಟಿಂಗ್ ಕಾರ್ಡು, ಈಮೈಲು, ನಾಮಫಲಕ ಮುಂತಾದ
ದೈನಂದಿನ ವ್ಯವಹಾರಗಳಲ್ಲಿ ಹೆಸರನ್ನು ಬದಲಾಯಿಸಬೇಕು.
ಈ ವಿಧಾನದಂತೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಂತೆ
ಕೆಳಗಿನ ಹೆಸರುಗಳನ್ನು ಆರಿಸಬಹುದು.
·
ವಯುಕ್ತಿಕ ಹೆಸರು
·
ಪಾಲುದಾರರ/ಸಂಗಾತಿಯ ಹೆಸರು
·
ಅಂಗಡಿಯ ಹೆಸರು
·
ಕಾರ್ಖಾನೆಯ ಹೆಸರು
·
ಮುದ್ರೆಯ ಹೆಸರು
·
ಸಿನೆಮಾ ಹೆಸರು
·
ಧಾರಾವಾಹಿಯ ಹೆಸರು.
- ಎಸ್ ಶರ್ಮ ವಶಿಷ್ಠ
No comments:
Post a Comment