ಬಲರಾಮನು ಶೇಷನಾಗನ ಒಂದು ಅವತಾರ.
ಶ್ರೀರಾಮನು ಭೂಮಿಯಲ್ಲಿ ಅವತರಿಸಿದಾಗ ಶೇಷನಾಗನು
ಶ್ರೀರಾಮನ ತಮ್ಮ ಲಕ್ಷ್ಮಣನಾಗಿ ಅವತರಿಸಿದನು.
ಶ್ರೀಕೃಷ್ಣನು ಭೂಮಿಯಲ್ಲಿ ಅವತರಿಸಿದಾಗ ಶೇಷನಾಗನು
ಶ್ರೀಕೃಷ್ಣನ ಅಣ್ಣ ಬಲರಾಮನಾಗಿ ಅವತರಿಸಿದನು.
ಬಲರಾಮನು ದೇವಕಿ ಮತ್ತು ವಸುದೇವರ 7ನೇ ಮಗು ಮತ್ತು
ರೋಹಿಣಿಯ ಗರ್ಭದಲ್ಲಿ ಜನಿಸಿದ.
ಕಾಳಸರ್ಪ ದೋಷಕ್ಕೆ ಬಲರಾಮನಿಂದ ಪರಿಹಾರ ಸಿಗುತ್ತದೆ.
ಕಾಳಸರ್ಪ ದೋಷ ಪರಿಹಾರಕ್ಕೆ ಶ್ರೀರಾಮಮಂದಿರಕ್ಕೆ
ಹೋಗಬೇಕು.
ನೇಗಿಲು, ಗಧೆ, ನೀಲಿ ಬಣ್ಣ ಮತ್ತು ಬೆಣ್ಣೆ ಬಲರಾಮನಿಗೆ
ಅತ್ಯಂತ ಪ್ರಿಯವಾದವುಗಳು.
ಕಾಳಸರ್ಪ ದೋಷ ಪರಿಹಾರಕ್ಕೆ ಈ ಮೇಲಿನ ವಸ್ತುಗಳನ್ನು
ಬಲರಾಮನಿಗೆ ಸಮರ್ಪಿಸಬಹುದು.
ಬಲರಾಮ ಜಯಂತಿಯು ಶ್ರೀಕೃಷ್ಣ ಜನ್ಮಾಷ್ಟಮಿಯಂತೆ
ಪ್ರಮುಖವಾದುದು.
ಬಲರಾಮ ಜಯಂತಿಯ ಆಚರಣೆಯಿಂದ ಶ್ರೀಕೃಷ್ಣನ ಕೃಪೆಯೂ
ಸಿಗುತ್ತದೆ.
ಕೆಲವು ಕಡೆ ಬಲರಾಮ ಜಯಂತಿಯನ್ನು ಆಗಸ್ಟ್ 15 ರಂದು
ಮತ್ತು ಕೆಲವು ಕಡೆ ಆಗಸ್ಟ್ 16 ರಂದು ಆಚರಿಸುತ್ತಾರೆ. ಬಲ್ಲವರಿಂದ ತಿಳಿದು ಆಚರಿಸುವುದು ಉತ್ತಮ.
- ಎಸ್ ಶರ್ಮ ವಶಿಷ್ಠ
No comments:
Post a Comment