Adcode

ಬಲರಾಮ ಜಯಂತಿ


ಬಲರಾಮನು ಶೇಷನಾಗನ ಒಂದು ಅವತಾರ.
ಶ್ರೀರಾಮನು ಭೂಮಿಯಲ್ಲಿ ಅವತರಿಸಿದಾಗ ಶೇಷನಾಗನು ಶ್ರೀರಾಮನ ತಮ್ಮ ಲಕ್ಷ್ಮಣನಾಗಿ ಅವತರಿಸಿದನು.
ಶ್ರೀಕೃಷ್ಣನು ಭೂಮಿಯಲ್ಲಿ ಅವತರಿಸಿದಾಗ ಶೇಷನಾಗನು ಶ್ರೀಕೃಷ್ಣನ ಅಣ್ಣ ಬಲರಾಮನಾಗಿ ಅವತರಿಸಿದನು.
ಬಲರಾಮನು ದೇವಕಿ ಮತ್ತು ವಸುದೇವರ 7ನೇ ಮಗು ಮತ್ತು ರೋಹಿಣಿಯ ಗರ್ಭದಲ್ಲಿ ಜನಿಸಿದ.
ಕಾಳಸರ್ಪ ದೋಷಕ್ಕೆ ಬಲರಾಮನಿಂದ ಪರಿಹಾರ ಸಿಗುತ್ತದೆ.
ಕಾಳಸರ್ಪ ದೋಷ ಪರಿಹಾರಕ್ಕೆ ಶ್ರೀರಾಮಮಂದಿರಕ್ಕೆ ಹೋಗಬೇಕು.
ನೇಗಿಲು, ಗಧೆ, ನೀಲಿ ಬಣ್ಣ ಮತ್ತು ಬೆಣ್ಣೆ ಬಲರಾಮನಿಗೆ ಅತ್ಯಂತ ಪ್ರಿಯವಾದವುಗಳು.
ಕಾಳಸರ್ಪ ದೋಷ ಪರಿಹಾರಕ್ಕೆ ಈ ಮೇಲಿನ ವಸ್ತುಗಳನ್ನು ಬಲರಾಮನಿಗೆ ಸಮರ್ಪಿಸಬಹುದು.
ಬಲರಾಮ ಜಯಂತಿಯು ಶ್ರೀಕೃಷ್ಣ ಜನ್ಮಾಷ್ಟಮಿಯಂತೆ ಪ್ರಮುಖವಾದುದು.
ಬಲರಾಮ ಜಯಂತಿಯ ಆಚರಣೆಯಿಂದ ಶ್ರೀಕೃಷ್ಣನ ಕೃಪೆಯೂ ಸಿಗುತ್ತದೆ.

ಕೆಲವು ಕಡೆ ಬಲರಾಮ ಜಯಂತಿಯನ್ನು ಆಗಸ್ಟ್ 15 ರಂದು ಮತ್ತು ಕೆಲವು ಕಡೆ ಆಗಸ್ಟ್ 16 ರಂದು ಆಚರಿಸುತ್ತಾರೆ. ಬಲ್ಲವರಿಂದ ತಿಳಿದು ಆಚರಿಸುವುದು ಉತ್ತಮ.
- ಎಸ್ ಶರ್ಮ ವಶಿಷ್ಠ

ಹನುಮಾನ್ ಚಾಲೀಸದ ಮಹತ್ವ


ಹನುಮಾನ್ ಚಾಲೀಸವು ಮಹಾಸ್ವಾಮೀ ಗೋಸ್ವಾಮಿ ತುಳಸಿದಾಸರ ಒಂದು ಮಹಾನ್ ಕಾವ್ಯಾತ್ಮಕ ಸಂಯೋಜನೆ. ತುಳಸಿದಾಸರನ್ನು ವಾಲ್ಮೀಕಿ ಮಹರ್ಷಿಯ ಅವತಾರವೆಂದು ಹೇಳಲಾಗುತ್ತದೆ. ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂಧರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗುತ್ತದೆ. ಚಾಲೀಸ ಎಂದರೆ 40, ಹನುಮಾನ್ ಚಾಲೀಸದಲ್ಲಿ 40 ಪದ್ಯಗಳ ಮೂಲಕ ಹನುಮಂತನನ್ನು ವರ್ಣಿಸಲಾಗಿದೆ.  

ತುಳಸಿದಾಸರು ಹೇಳುವಂತೆ ಹನುಮಾನ್ ಚಾಲೀಸವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಹನುಮಾನ್ ಚಾಲೀಸವನ್ನು ಪಠಿಸಲು ವಿಶೇಷವಾದ ಕಾರಣಗಳಿವೆ. ಹನುಮಾನ್ ಚಾಲೀಸದ 40 ಪದ್ಯಗಳನ್ನು 40 ದಿನಗಳು ನಿರಂತರವಾಗಿ ಪಠಿಸಿದರೆ ನಮ್ಮ ಒಂದು ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಮತ್ತು ಅಪಾರ ಪುಣ್ಯ ಸಿಗುತ್ತದೆ. ದಿವ್ಯವಾದ ಹನುಮಾನ್ ಚಾಲೀಸವು ಬಹಳ ಶಕ್ತಿಶಾಲಿಯಾಗಿದೆ.

ಜ್ಯೋತಿಶ್ಶಾಸ್ತ್ರದ ಪ್ರಾಮುಖ್ಯತೆ
ಜ್ಯೋತಿಷ್ಯದ ಪ್ರಕಾರ ಕಂಡ ಅಂಶವೆಂದರೆ, ಶನಿಗ್ರಹದ ಗೊಚಾರದ, ಸಣ್ಣ ಮತ್ತು ದೊಡ್ಡ ಅವಧಿಗಳ ಕೆಟ್ಟ ಪರಿಣಾಮಗಳನ್ನು  ನಿಯಂತ್ರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ. ಶನಿಗ್ರಹದ ಋಣಾತ್ಮಕ ಪ್ರಭಾವದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಪ್ರತೀ ಶನಿವಾರ 8 ಬಾರಿ ಪಠಿಸುವುದರಿಂದ ಉತ್ತಮ ಪರಿಹಾರ ಮತ್ತು ಲಾಭವಾಗುತ್ತದೆ. ಮಂಗಳನ ದೋಷ ಅಥವಾ ಕುಜ ದೋಷವಿರುವವರು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಮಂಗಳನ ಧನಾತ್ಮಕ ಗುಣಗಳಾದ ಶಕ್ತಿ, ಧೈರ್ಯ, ಸಾಹಸ ಮತ್ತು ಅದಮ್ಯ ಚೇತನಗಳನ್ನು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಪಡೆಯಬಹುದು.
ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ.
ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ. ಇದನ್ನು ಬೆಳಿಗ್ಗೆ ಅಥವಾ ಸಂಜೆ  ಪಠಿಸಬಹುದು. ಈ ಸುಂದರವಾದ ಶ್ಲೋಕಗಳನ್ನು ಪಠಿಸಲು ಗರಿಷ್ಠ 10 ನಿಮಿಷಗಳು ಬೇಕಾಗಬಹುದು.
ಪ್ರತಿ ಪದ್ಯ ಅಥವಾ ಚೌಪಾಯಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.
ಎಲ್ಲಾ 40 ಪದ್ಯಗಳನ್ನು ಓದಲು ಆಗದವರು ತಮ್ಮ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು. ಅವುಗಳ ಮಹತ್ವ ಹೀಗಿದೆ.
·         ದುಷ್ಕರ್ಮಗಳನ್ನು ತೆಗೆಯಲು => ಮೊದಲ ಆರಂಭದ ಪದ್ಯ
·         ಬುದ್ದಿವಂತಿಕೆ ಮತ್ತು ಶಕ್ತಿ => ಎರಡನೇ ಆರಂಭದ ಪದ್ಯ
·         ದೈವಿಕ ಜ್ಞಾನವನ್ನು ಹೊಂದಲು => ಮೊದಲ ಪದ್ಯ
·         ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ => 3ನೇ ಪದ್ಯ
·         ಭಕ್ತಿ ಭಾವ ತುಂಬಲು => 7 ಮತ್ತು 8ನೇ ಪದ್ಯ
·         ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆ => 11ನೇ ಪದ್ಯ
·         ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ಮನಸ್ತಾಪ ತೆಗೆದುಹಾಕಲು => 12ನೇ ಪದ್ಯ
·         ಖ್ಯಾತಿ ಪಡೆಯಲು => 13, 15ನೇ ಪದ್ಯಗಳು
·         ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, ಉದ್ಯೋಗದಲ್ಲಿ ಬಡ್ತಿ => 16, 17ನೇ ಪದ್ಯಗಳು
·         ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರ ಕಾರ್ಯವೆಸಗಲು => 20ನೇ ಪದ್ಯ
·         ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆ => 22ನೇ ಪದ್ಯ
·         ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ => 24ನೇ ಪದ್ಯ
·         ಉತ್ತಮ ಆರೋಗ್ಯಕ್ಕಾಗಿ => 25ನೇ ಪದ್ಯ
·         ಬಿಕ್ಕಟ್ಟಿನಿಂದ ವಿಮೋಚನೆಗಾಗಿ => 26ನೇ ಪದ್ಯ
·         ಆಸೆಗಳ ಈಡೇರಿಕೆಗೆ => 27, 28ನೇ ಪದ್ಯಗಳು
·         ಶತ್ರುಗಳ ಮೇಲೆ ವಿಜಯವನ್ನು ಪಡೆಯಲು => 30ನೇ ಪದ್ಯ
·         ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು => 31ನೇ ಪದ್ಯ
·         ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು => 32ರಿಂದ 35ನೇ ಪದ್ಯ
·         ಮಾನಸಿಕ ಶಾಂತಿಗಾಗಿ => 36ನೇ ಪದ್ಯ
·         ಹನುಮನ ಕೃಪೆಗಾಗಿ => 37ನೇ ಪದ್ಯ

ಹನುಮಾನ್ ಚಾಲೀಸಾವನ್ನು ಓದುವುದರ ಪ್ರಯೋಜನಗಳು

ಇದು ದೇಹ ಮತ್ತು ಮನಸ್ಸು ಎರಡರ ಮೇಲೆ ಶುದ್ಧೀಕರಿಸುವ ಪರಿಣಾಮವನ್ನು ಹೊಂದಿದೆ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ. ಇದು ಜೀವನದಲ್ಲಿ ಎಲ್ಲಾ ಅಪಾಯಗಳಿಂದ ಪಾರುಮಾಡುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನ ಗಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ವಿಶ್ವಾಸ ಹೆಚ್ಚುತ್ತದೆ. ಉದ್ಯೋಗ ಸಂದರ್ಶನಗಳಿಗೆ ಹೋಗುವಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಕಾನೂನು ಅವ್ಯವಸ್ಥೆ, ದಾವೆ ಮತ್ತು ಬ೦ಧನಗಳಿಂದ ಮುಕ್ತಿ ಪಡೆಯಲು ಹನುಮಾನ್ ಚಾಲೀಸವನ್ನು 100 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ಹೆಚ್ಚು ಅರ್ಥಪೂರ್ಣವಾಗಿ, ಹನುಮಾನ್ ಚಾಲೀಸವನ್ನು ರಾತ್ರಿ ಪಠಿಸುವುದರಿಂದ ಇದು ಜನರ ಜೀವನದಿಂದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ ಮತ್ತು ತಿಳಿದೂ / ತಿಳಿಯದೆಯೋ ಮಾಡಿದ ಪಾಪಗಳನ್ನು ತೆಗೆದುಹಾಕುತ್ತದೆ. ಮಹಾನ್ ಕಾರ್ಯಗಳನ್ನು  ಸಾಧಿಸಬೇಕಾಗಿರುವವರು ಮಂಗಳವಾರ, ಗುರುವಾರ ಮತ್ತು ಶನಿವಾರದ ಮಂಗಳಕರ ರಾತ್ರಿ ಅಥವಾ ಮೂಲಾ ನಕ್ಷತ್ರದ ದಿನ ಹನುಮಾನ್ ಚಾಲೀಸವನ್ನು 1008 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ರಾತ್ರಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಉತ್ತಮ ಜೀವನದ ಎಲ್ಲಾ ಅಡೆತಡೆಗಳನ್ನು ತೆಗೆದು ಕಾಣಿಸುತ್ತದೆ ಮತ್ತು ಹನುಮಂತನ ರಕ್ಷಣೆ ಮತ್ತು ಕೃಪೆಗೆ ಪಾತ್ರರಾಗುತ್ತಾರೆ.
- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ವಾಸ್ತು ಮೆಟ್ಟಿಲುಗಳು ಮತ್ತು ಶೌಚಾಲಯ


ಮನೆಯಲ್ಲಿ ಮೆಟ್ಟಿಲುಗಳು ಅಥವಾ ಶೌಚಾಲಯ ಪೂರ್ವಮೂಲೆಯಲ್ಲಿದ್ದರೆ ಕುಟುಂಬದ ಸದಸ್ಯರ ಜಾತಕದಲ್ಲಿ ಸೂರ್ಯನ ಸ್ಥಿತಿ ಉತ್ತಮವಾಗಿರುವುದಿಲ್ಲ. ಆಗ ಈ ಕೆಳಗಿನ ಘಟನೆಗಳು ಆಗಬಹುದು.
·         ಕುಟುಂಬದ ಹಿರಿಯ(ಪುರುಷ) ವ್ಯಕ್ತಿಯ ಶೀಘ್ರ/ಅಕಾಲಿಕ ಮರಣ ಉಂಟಾಗಬಹುದು.
·         ಕುಟುಂಬದಲ್ಲಿನ ಪುರುಷರು ದಿಕ್ಕುತಪ್ಪುತ್ತಾರೆ. ಅವರು ತಮಗೆ ಯೋಗ್ಯವಾದ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದಿಲ್ಲ.
·         ಕುಟುಂಬದಲ್ಲಿನ ಪುರುಷರಲ್ಲಿ ಮನಸ್ತಾಪ ಜಗಳಗಳು ಉಂಟಾಗಬಹುದು.
·         ವ್ಯಾಪಾರದಲ್ಲಿ ನಷ್ಟ ಅಥವಾ ವ್ಯಾಪಾರವನ್ನು ಮುಚ್ಚಬಹುದು.
·         ಆದಾಯ ತೆರಿಗೆ ದಂಡ, ವಿದ್ಯುತ್ ಕಳ್ಳತನ ವ್ಯಾಜ್ಯ, ಕೆಲಸಗಾರರ ವ್ಯಾಜ್ಯ ಮುಂತಾದ ಸರಕಾರೀ ತೊಂದರೆಗಳು ಬರಬಹುದು.
 
ಕೆಳಗಿನ ಕೆಲವೊಂದು ಪರಿಹಾರೋಪಾಯಗಳಿಂದ ಮನೆಯ ಮೆಟ್ಟಿಲುಗಳು ಅಥವಾ ಶೌಚಾಲಯ ಪೂರ್ವಮೂಲೆಯಲ್ಲಿರುವ ತೊಂದರೆಯಿಂದ ಸ್ವಲ್ಪ ಪರಿಹಾರ ಸಿಗಬಹುದು. ಆದರೆ ಸಂಪೂರ್ಣವಾಗಿ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಿಲ್ಲ.
·         ಕುಟುಂಬದ ಎಲ್ಲಾ ಸದಸ್ಯರು ಬೆಳ್ಳಿಯ ಸರ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಬೇಕು.
·         ಮನೆಯಲ್ಲಿ ಬೆಳ್ಳಿಯ ಆಭರಣಗಳನ್ನು ಇಡಬೇಕು.
·         ಮನೆಯಲ್ಲಿ ಉತ್ತರ ಭಾಗದಲ್ಲಿ 20 ಲೀಟರ್ ಶುದ್ದವಾದ ನೀರನ್ನು ಇಡಬೇಕು.
·         ಅಡುಗೆ ಮನೆಯಲ್ಲಿ 20 ಕಿಲೋ ಅಕ್ಕಿಯನ್ನು ಇಡಬೇಕು.
·         ಮನೆಯ ಪೂರ್ವ ಭಾಗಕ್ಕೆ ಬಿಳಿ ಅಥವಾ ಕೆಂಪು ಬಣ್ಣ ಹಚ್ಚಬೇಕು.
·         ಕುಟುಂಬದ ಎಲ್ಲಾ ಸದಸ್ಯರು ಭಾನುವಾರ ಮತ್ತು ಮಂಗಳವಾರ ಮಾತ್ರ ಸಿಹಿ ಆಹಾರವನ್ನು ಸೇವಿಸಬೇಕು.
·         ಹೋಟೆಲುಗಳಿಂದ ಆಹಾರವನ್ನು ಮನೆಗೆ ತರಬಾರದು.
·         ಅಡುಗೆ ಮನೆಯಲ್ಲಿಯೇ ಊಟವನ್ನು ಮಾಡಬೇಕು.
·         ಕುಟುಂಬದ ಎಲ್ಲಾ ಸದಸ್ಯರು ಸಸ್ಯಾಹಾರಿಗಳಾಗಿರಬೇಕು ಮತ್ತು ಮಧ್ಯಪಾನ ಮಾಡಬಾರದು.
·         ಮಲಗುವ ಕೋಣೆಯಲ್ಲಿ ಮತ್ತು ಹಾಸಿಗೆ ಮೇಲೆ ಊಟವನ್ನು ಮಾಡಬಾರದು.
·         ಆ ಭಾಗವನ್ನು ಅಚ್ಚುಕಟ್ಟಾಗಿ, ಶುದ್ಧ ಮತ್ತು ಮುಕ್ತವಾಗಿಡಿ.
·         ಮೆಟ್ಟಿಲುಗಳ ಕೆಳಗೆ ಕಸದ ಬುಟ್ಟಿ ಮತ್ತು ಉಪಯೋಗವಿಲ್ಲದ ವಸ್ತುಗಳನ್ನು ಇಡಬೇಡಿ.
·         ಶೌಚಾಲಯ/ನೆಲ ಸ್ವಚ್ಛಮಾಡುವ ರಾಸಾಯನಿಕಗಳು, ಬಟ್ಟೆ ಒಗೆಯುವ ಹುಡಿ ಮುಂತಾದುವುಗಳನ್ನು ಶೌಚಾಲಯದಲ್ಲಿ  ಇಡಬೇಡಿ.
·         ಮುಕ್ತವಾಗಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಡಿ.
·         ಪ್ರತೀವರ್ಷ ಕುಟುಂಬದ ಎಲ್ಲಾ ಸದಸ್ಯರಿಂದ ಹಣವನ್ನು ಸಂಗ್ರಹಿಸಿ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದನ್ನು ಕುಟುಂಬದ ಎಲ್ಲಾ ಸದಸ್ಯರಿಂದ ಮುಟ್ಟಿಸಿ ನಂತರ ಅವರ ಪರವಾಗಿ ಹರಿಯುವ ನೀರಿನಲ್ಲಿ ಬಿಡಿ. (ಪ್ರತಿಯೊಂದು ಸದಸ್ಯರ ಪರವಾಗಿ ಒಂದೊಂದು ತೆಂಗಿನ ಕಾಯಿಯನ್ನು ನೀರಿನಲ್ಲಿ ಬಿಡಬಹುದು).
·         ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ/ವ್ಯಾಪಾರ ಮಾಡಬಾರದು.
·         ಇಲೆಕ್ಟ್ರಾನಿಕ್ ಉಪಕರಣಗಳನ್ನು ಉಡುಗೊರೆಯಾಗಿ ಸ್ವೀಕರಿಸಬೇಡಿ (ಮದುವೆಯ ಸಂದರ್ಭದಲ್ಲಿ ಕೂಡ).
·         ಹಳೆಯ ಮತ್ತು ಹಾಳಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಮನೆಯಲ್ಲಿ ಇಡಬೇಡಿ.
·         ಕುಟುಂಬದ ಎಲ್ಲಾ ಸದಸ್ಯರು ತಮ್ಮ ಜೀವನದ ಎಲ್ಲಾ ಹಂತದಲ್ಲಿ ನೀಲಿಬಣ್ಣದ ಉಪಯೋಗವನ್ನು ತ್ಯಜಿಸಬೇಕು.
- ಎಸ್ ಶರ್ಮ ವಶಿಷ್ಠ

ಜ್ಯೋತಿಷ್ಯ ಮತ್ತು ಷೇರು ಮಾರುಕಟ್ಟೆ ಮತ್ತು ಬೆಳ್ಳಿ ಸರಕು


ಪರಿಹಾರ ಮಾರ್ಗೋಪಾಯಗಳಿಂದ ಚಂದ್ರಗ್ರಹದ ಬಲವನ್ನು ಹೆಚ್ಚಿಸುವುದರ ಮೂಲಕ ನಮ್ಮ ಲಾಭಸಾಧ್ಯತೆಗಳನ್ನು ಷೇರು ಮಾರುಕಟ್ಟೆಯಲ್ಲಿ ನಾವು ಸಾಮಾನ್ಯವಾಗಿ ಲಾಭಕ್ಕಾಗಿ ಷೇರುಗಳ ಖರೀದಿ / ಮಾರಾಟ ಮಾಡುತ್ತೇವೆ. ಆದರೆ ಈಗ ನಾವು ಷೇರುಗಳ ನಂತಹ ನಿರ್ದಿಷ್ಟ ಪದಾರ್ಥಗಳ ವ್ಯಾಪಾರ ಮಾಡಬಹುದು. ಮುಖ್ಯವಾಗಿ ಬೆಳ್ಳಿ ಸರಕು(Silver Commodity) ವ್ಯಾಪಾರ ಒಂದಾಗಿದೆ. ಪ್ರತಿಯೊಂದು ವ್ಯಾಪಾರಿ ಬೆಳ್ಳಿಯ ವ್ಯಾಪಾರ ಮಾಡುತ್ತಾರೆ. ಆದರೆ ಕೆಲವರು ಹಣ ಗಳಿಸುತ್ತಾರೆ ಮತ್ತು ಕೆಲವರು ಹಣ ಕಳೆದುಕೊಳ್ಳುತ್ತಾರೆ.
ಈಗ ನಾವು ಜ್ಯೋತಿಷ್ಯದ ಪ್ರಕಾರ ಬೆಳ್ಳಿಯ ಸರಕಿನ ಬಗ್ಗೆ  ಚರ್ಚಿಸೋಣ. ಜ್ಯೋತಿಷ್ಯದ ಪ್ರಕಾರ ಬೆಳ್ಳಿಯನ್ನು ಚಂದ್ರ ಗ್ರಹ ಪ್ರತಿನಿಧಿಸುತ್ತದೆ. ತಾಯಿ ಮತ್ತು ಹಿರಿಯ ಸ್ತ್ರೀಯರು ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತಾರೆ. ಬೆಳ್ಳಿಯ ವ್ಯಾಪಾರ ಮಾಡುವವರು ತಾಯಿ ಮತ್ತು ಹಿರಿಯ ಸ್ತ್ರೀಯರನ್ನು ಗೌರವಿಸಬೇಕು ಇದರಿಂದ ಚಂದ್ರ ಗ್ರಹವು ಅನುಕೂಲಕರವಾಗುತ್ತದೆ.
ಹರಿಯುವ ನದಿ/ನೀರೂ ಸಹಾ ಚಂದ್ರಗ್ರಹವನ್ನು ಪ್ರತಿನಿಧಿಸುತ್ತದೆ. ಬೆಳ್ಳಿಯ ವ್ಯಾಪಾರ ಮಾಡುವವರು ಹರಿಯುವ ನದಿ/ನೀರನ್ನು ಕಲುಷಿತ ಮಾಡಬಾರದು. ಇದರಿಂದ ಚಂದ್ರ ಗ್ರಹವು ಅನುಕೂಲಕರವಾಗುತ್ತದೆ.
ಬೆಳ್ಳಿಯ ವ್ಯಾಪಾರ ಮಾಡುವವರು ನೀರು ಪೋಲಾಗುವುದನ್ನು ತಡೆದರೆ ಚಂದ್ರ ಗ್ರಹವು ಅನುಕೂಲಕರವಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಚಂದ್ರನನ್ನು ಬಲಗೊಳಿಸುವ ಮೂಲಕ ಕೆಲವೊಂದು ಪರಿಹಾರಗಳನ್ನು ಮಾಡಬಹುದು.  ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಸ್ಥಾನವನ್ನು ನೋಡಬೇಕು.
 
ಜಾತಕದಲ್ಲಿ ಚಂದ್ರಗ್ರಹವು ಮಿತ್ರಕ್ಷೇತ್ರ, ಪ್ರಭಲಸ್ಥಾನ ಮತ್ತು ಅನುಕೂಲಕರ ಸ್ಥಾನದಲ್ಲಿದ್ದರೆ ಬೆಳ್ಳಿಯ ಸರಕು ವ್ಯಾಪಾರ ಲಾಭದಾಯಕವಾಗಿರುತ್ತದೆ. 
ಜಾತಕದಲ್ಲಿ ಚಂದ್ರಗ್ರಹವು ಮಿತ್ರಕ್ಷೇತ್ರ, ಉಚ್ಚಕ್ಷೇತ್ರ, 1ನೇ, 2ನೇ, 4ನೇ, 5ನೇ, 9ನೇ ಅಥವಾ 12ನೇ ಮನೆಯಲ್ಲಿದ್ದರೆ ಬೆಳ್ಳಿಯವ  ಸರಕು ವ್ಯಾಪಾರ ಸೂಕ್ತವಾಗಿರುತ್ತದೆ. ಇದರಲ್ಲಿ ಲಾಭದ ಸಾಧ್ಯತೆಗಳಿವೆ.
ಜಾತಕದಲ್ಲಿ 1ನೇ ಮನೆ / ಲಗ್ನ ರಾಶಿಯು ಮೇಷ, ಕಟಕ, ಕನ್ಯಾ, ವೃಶ್ಚಿಕ, ಮೀನ ಆಗಿದ್ದರೆ ಚಿನ್ನದ ಸರಕು ವ್ಯಾಪಾರಕ್ಕೆ ತುಂಬಾ ಅವಕಾಶಗಳಿರುತ್ತದೆ. ಇದು ಜಾತಕದಲ್ಲಿ ಚಂದ್ರಗ್ರಹದ ಸ್ಥಾನದ ಮೇಲೂ ಕೂಡಾ ಅವಲಂಬಿತವಾಗಿದೆ.
ಈ ಮೇಲಿನ ಸ್ಥಾನಗಳಲ್ಲಿ ಹೆಚ್ಚಿಸಿಕೊಳ್ಳಬಹುದು.
ಜಾತಕದಲ್ಲಿ ಚಂದ್ರಗ್ರಹವು ಶತ್ರು ಸ್ಥಾನ,ಶಕ್ತಿಹೀನ ಸ್ಥಾನ, ಅಶುಭ/ಅನಾನುಕೂಲದ ಸ್ಥಾನದಲ್ಲಿದ್ದರೆ  ಬೆಳ್ಳಿಯ ಸರಕು ವ್ಯಾಪಾರ ಸೂಕ್ತವಲ್ಲ.
ಜಾತಕದಲ್ಲಿ 1ನೇ ಮನೆ / ಲಗ್ನ ರಾಶಿಯು ವೃಷಭ, ಮಿಥುನ, ಸಿಂಹ, ತುಲಾ, ಧನು, ಮಖರ, ಕುಂಭ ಆಗಿದ್ದರೆ ಬೆಳ್ಳಿಯ ಸರಕು ವ್ಯಾಪಾರ ಸೂಕ್ತವಲ್ಲ. ಇದು ಜಾತಕದಲ್ಲಿ ಚಂದ್ರಗ್ರಹದ ಸ್ಥಾನದ ಮೇಲೂ ಕೂಡಾ ಅವಲಂಬಿತವಾಗಿದೆ.
ಜಾತಕದಲ್ಲಿ ಚಂದ್ರಗ್ರಹವು ಶತ್ರುಕ್ಷೇತ್ರ, ನೀಚಕ್ಷೇತ್ರ, 6ನೇ, 7ನೇ, 8ನೇ, 10ನೇ, 11ನೇ ಮನೆಯಲ್ಲಿದ್ದರೆ ಬೆಳ್ಳಿಯ ಸರಕು ವ್ಯಾಪಾರ ಸೂಕ್ತವಲ್ಲ. ಇದರಲ್ಲಿ ನಷ್ಟದ ಸಾಧ್ಯತೆಗಳಿವೆ.

ಈ ಮೇಲಿನ ಸ್ಥಾನಗಳಲ್ಲಿ ಬೆಳ್ಳಿಯ ಸರಕು ವ್ಯಾಪಾರ ನೈಸರ್ಗಿಕವಾಗಿ ಪ್ರಯೋಜನಕಾರಿಯಾಗಿರುವುದಿಲ್ಲ. ವ್ಯಾಪಾರಿಗಳು ಬೆಳ್ಳಿಯ ಸರಕು ವ್ಯಾಪಾರ ಮಾಡಬಾರದು. ಆದರೆ ಬೆಳ್ಳಿಯ ವ್ಯಾಪಾರ ಸಾಧ್ಯವಿಲ್ಲದಿದ್ದರೂ ಇದರಲ್ಲಿನ ನಷ್ಟ ಕಡಿಮೆ ಮಾಡಲು ಕೆಲವು ಪರಿಹಾರಮಾರ್ಗಗಳಿರುತ್ತದೆ.
- ಎಸ್ ಶರ್ಮ ವಶಿಷ್ಠ

ಶ್ರೀ ತುಳಸಿ ಪೂಜಾ ವಿಧಾನ


ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
  ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||

|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||

ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ

ಶ್ರೀ ತುಳಸಿ ನಮಸ್ಕಾರ  
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||

ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.


ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.