ಜ್ಯೋತಿಷ್ಯದಲ್ಲಿ, ಜ್ಯೋತಿಷಿಗಳು ಏನಾದರೂ ಪರಿಹಾರ ಹೇಳಿದರೆ
ಜನರು, ಈ ಪರಿಹಾರದ ಹಿಂದಿರುವ ತಾರ್ಕಿಕತೆ ಏನು? ಈ ಪರಿಹಾರದ ಉಪಯೋಗ ಏನು? ಎಂದು ಪ್ರಶ್ನಿಸುತ್ತಾರೆ. ಎಲ್ಲಾ ಜೋತಿಷಿಗಳೂ
ಸಹ ಇಂತಹಾ ಪ್ರಶ್ನೆಗಳನ್ನು ಎದುರಿಸುತ್ತಾರೆ.ಕೆಲವು ಸಮಯದಲ್ಲಿ ಜೋತಿಷಿಗಳು ಪರಿಹಾರದ ಹಿಂದಿರುವ
ತಾರ್ಕಿಕತೆಯನ್ನು ವಿವರಿಸಲು ಅಸಮರ್ಥರಾಗಿರುತ್ತಾರೆ ಅನ್ನೂದಂತೂ ನಿಜ.
ಉದಾಹರಣೆಗೆ
ಜೋತಿಷಿಗಳು ಕೆಲವೊಮ್ಮೆ, ಕನ್ಯಾಪೂಜೆ ಮಾಡಿ 9ವರ್ಷ ವಯಸ್ಸಿನ
ಒಳಗಿನ ಹೆಣ್ಣು ಮಕ್ಕಳ ಆಶೀರ್ವಾದ ಪಡೆಯಿರಿ ಎಂದು ಹೇಳುತ್ತಾರೆ.
ಇದರ
ಹಿಂದಿರುವ ವಿಚಾರವೆಂದರೆ 9ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳು ಬುಧ ಗ್ರಹವನ್ನು ಪ್ರತಿನಿಧಿಸುತ್ತವೆ.ಮತ್ತು
ಸೂಚಿಸಲ್ಪಟ್ಟ ವ್ಯಕ್ತಿಗಳು ಕನ್ಯಾಪೂಜೆ ಮಾಡಿದರೆ ಅವರ ಬುಧ ಗ್ರಹ ಅವರಿಗೆ ಧನಾತ್ಮಕವಾಗುತ್ತದೆ.
ಈಗ
ಪ್ರಶ್ನೆಏನೆಂದರೆ ಈ ಪರಿಹಾರದ ಪ್ರಾಯೋಗಿಕ ಉಪಯೋಗಗಳೇನು ?
ನಮ್ಮ
ಮಹಾನ್ ಋಷಿ ಮುನಿಗಳು ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವ ಕಾಲಜ್ಞಾನ ಹೊಂದಿದ್ದರು. ಎಲ್ಲ
ಪಾಲಕರೂ ಸಹಾ ಗಂಡು ಮಗುವನ್ನೇ ಅಪೇಕ್ಷಿಸುತ್ತಾರೆ. ಯಾರೂ ಹೆಣ್ಣು ಮಗುವನ್ನು
ಅಪೇಕ್ಷಿಸುವುದಿಲ್ಲ.
ಭವಿಷ್ಯದ
ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೆಂದರೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಕಡಿಮೆ
ಇರುತ್ತಾರೆ. ಮತ್ತು ಈ ಅಂಕಿ ಅಂಶ ವ್ಯತ್ಯಾಸದಿಂದ ಮಾನಭಂಗಗಳಂತ ದೊಡ್ಡ ದೊಡ್ಡ ತೊಂದರೆಗಳು
ಭವಿಷ್ಯದಲ್ಲಿ ಬರುತ್ತವೆ ಎಂದು ಋಷಿ ಮುನಿಗಳು
ಮೊದಲೇ ಊಹಿಸಿದ್ದರು. ಆದ್ದರಿಂದ
ನಮ್ಮ ಮಹಾನ್ ಋಷಿ-ಮುನಿಗಳು ಕನ್ಯಾಪೂಜೆಯಂತಹ ಸಂಸ್ಕೃತಿಯನ್ನು ಆರಂಭಿಸಲು ನಿರ್ಧರಿಸಿದ್ದರು.
ಒಂದು
ವೇಳೆ 16 ವರ್ಷದ ಹುಡುಗ ಪಕ್ಕದ ಮನೆಯ 9 ವರ್ಷದ ಹುಡುಗಿಯ ಕನ್ಯಾ ಪೊಜೆ ಮಾಡಿದ ಎಂದು ಕೊಳ್ಳೋಣ.
ಈಗ 12
ವರ್ಷದ ನಂತರ ಹುಡುಗನಿಗೆ 28 ವರ್ಷ ಮತ್ತು ಆ
ಹುಡುಗಿಗೆ 21 ವರ್ಷ ಆಗಿರುತ್ತದೆ.
ಒಂದುವೇಳೆ
ಸಮಾಜದಲ್ಲಿ ಕಡಿಮೆ ಹುಡುಗಿಯರು ಇರುವುದರಿಂದ ಹುಡುಗನಿಗೆ ಮದುವೆ ಆಗದಿದ್ದರೆ ಮಾನಭಂಗದ ಪ್ರವೃತಿ
ಹೆಚ್ಚಾಗುತ್ತದೆ.
ಒಂದುವೇಳೆ
ಆ 28 ವರ್ಷದ ಹುಡುಗನು ಆ 21 ವರ್ಷದ ಹುಡುಗಿಯ ಮಾನಭಂಗ ಮಾಡಲು ಆಲೋಚಿಸಿದರೆ, ಅವನಿಗೆ ಈ ಹಿಂದೆ ದೇವಿಯ ಹಾಗೆ ಆ ಹುಡುಗಿಯ
ಪೂಜೆ ಮಾಡಿ ಆಶೀರ್ವಾದ ಪಡೆದ ನೆನಪಾಗಿ ಅವನು ಅತ್ಯಾಚಾರಿ ಆಗುವುದನ್ನು ತಪ್ಪಿಸಬಹುದು.
- ಎಸ್ ಶರ್ಮ ವಶಿಷ್ಠ
1xbet - No 1xbet Casino | Live dealer casino online
ReplyDelete1xbet is a febcasino reliable casino site that offers a great casino games wooricasinos.info from the best worrione.com software providers for the regulated gambling markets. Rating: casino-roll.com 8/10 · Review 1xbet 먹튀 by a Tripadvisor user · Free · Sports