ಷೇರು ಮಾರುಕಟ್ಟೆಯಲ್ಲಿ ನಾವು ಸಾಮಾನ್ಯವಾಗಿ ಲಾಭಕ್ಕಾಗಿ
ಷೇರುಗಳ ಖರೀದಿ / ಮಾರಾಟ ಮಾಡುತ್ತೇವೆ. ಆದರೆ ಈಗ ನಾವು ಷೇರುಗಳ ನಂತಹ ನಿರ್ದಿಷ್ಟ ಪದಾರ್ಥಗಳ ವ್ಯಾಪಾರ ಮಾಡಬಹುದು.
ಮುಖ್ಯವಾಗಿ ಚಿನ್ನದ ಸರಕು(Gold Commodity) ವ್ಯಾಪಾರ ಒಂದಾಗಿದೆ. ಪ್ರತಿಯೊಂದು ವ್ಯಾಪಾರಿ ಚಿನ್ನದ ವ್ಯಾಪಾರ ಮಾಡುತ್ತಾರೆ. ಆದರೆ ಕೆಲವರು ಹಣ ಗಳಿಸುತ್ತಾರೆ ಮತ್ತು
ಕೆಲವರು ಹಣ ಕಳೆದುಕೊಳ್ಳುತ್ತಾರೆ. ಈಗ
ನಾವು ಜ್ಯೋತಿಷ್ಯದ ಪ್ರಕಾರ ಚಿನ್ನದ ಸರಕಿನ ಬಗ್ಗೆ ಚರ್ಚಿಸೋಣ. ಜ್ಯೋತಿಷ್ಯದ ಪ್ರಕಾರ ಚಿನ್ನವನ್ನು ಗುರು ಗ್ರಹ
ಪ್ರತಿನಿಧಿಸುತ್ತದೆ.ಜ್ಯೋತಿಷ್ಯದಲ್ಲಿ ನಾವು ನಮ್ಮ ಜಾತಕದಲ್ಲಿ ಗುರುವಿನ ಸ್ಥಾನವನ್ನು
ಪರಿಶೀಲಿಸಬಹುದು.
ಜಾತಕದಲ್ಲಿ
ಗುರುಗ್ರಹವು ಮಿತ್ರಕ್ಷೇತ್ರ, ಪ್ರಭಲಸ್ಥಾನ ಮತ್ತು ಅನುಕೂಲಕರ ಸ್ಥಾನದಲ್ಲಿದ್ದರೆ
ಚಿನ್ನದ ಸರಕು ವ್ಯಾಪಾರ ಲಾಭದಾಯಕವಾಗಿರುತ್ತದೆ.
ಜಾತಕದಲ್ಲಿ
ಗುರುಗ್ರಹವು ಮಿತ್ರಕ್ಷೇತ್ರ, ಉಚ್ಚಕ್ಷೇತ್ರ, 1ನೇ, 2ನೇ, 4ನೇ, 5ನೇ, 9ನೇ ಅಥವಾ 12ನೇ ಮನೆಯಲ್ಲಿದ್ದರೆ ಚಿನ್ನದ ಸರಕು ವ್ಯಾಪಾರ ಸೂಕ್ತವಾಗಿರುತ್ತದೆ.
ಇದರಲ್ಲಿ ಲಾಭದ ಸಾಧ್ಯತೆಗಳಿವೆ.
ಜಾತಕದಲ್ಲಿ
1ನೇ ಮನೆ / ಲಗ್ನ ರಾಶಿಯು ಮೇಷ, ಮಿಥುನ, ಕಟಕ, ಸಿಂಹ, ಕನ್ಯಾ, ವೃಶ್ಚಿಕ, ಧನು, ಕುಂಭ, ಮೀನ ಆಗಿದ್ದರೆ ಚಿನ್ನದ ಸರಕು ವ್ಯಾಪಾರಕ್ಕೆ
ತುಂಬಾ ಅವಕಾಶಗಳಿರುತ್ತದೆ. ಇದು ಜಾತಕದಲ್ಲಿ ಗುರುಗ್ರಹದ ಸ್ಥಾನದ ಮೇಲೂ ಕೂಡಾ ಅವಲಂಬಿತವಾಗಿದೆ.
ಈ
ಮೇಲಿನ ಸ್ಥಾನಗಳಲ್ಲಿ ಪರಿಹಾರ ಮಾರ್ಗೋಪಾಯಗಳಿಂದ ಗುರುಗ್ರಹದ ಬಲವನ್ನು ಹೆಚ್ಚಿಸುವುದರ ಮೂಲಕ
ನಮ್ಮ ಲಾಭಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬಹುದು.
ಜಾತಕದಲ್ಲಿ
ಗುರುಗ್ರಹವು ಶತ್ರು ಸ್ಥಾನ,ಶಕ್ತಿಹೀನ ಸ್ಥಾನ, ಅಶುಭ/ಅನಾನುಕೂಲದ ಸ್ಥಾನದಲ್ಲಿದ್ದರೆ ಚಿನ್ನದ ಸರಕು ವ್ಯಾಪಾರ ಸೂಕ್ತವಲ್ಲ.
ಜಾತಕದಲ್ಲಿ
1ನೇ ಮನೆ / ಲಗ್ನ ರಾಶಿಯು ವೃಷಭ, ತುಲಾ, ಮಖರ ಆಗಿದ್ದರೆ ಚಿನ್ನದ ಸರಕು ವ್ಯಾಪಾರ ಸೂಕ್ತವಲ್ಲ.
ಇದು ಜಾತಕದಲ್ಲಿ ಗುರುಗ್ರಹದ ಸ್ಥಾನದ ಮೇಲೂ ಕೂಡಾ ಅವಲಂಬಿತವಾಗಿದೆ.
ಜಾತಕದಲ್ಲಿ
ಗುರುಗ್ರಹವು ಶತ್ರುಕ್ಷೇತ್ರ, ನೀಚಕ್ಷೇತ್ರ, 6ನೇ, 7ನೇ, 8ನೇ, 10ನೇ ಮನೆಯಲ್ಲಿದ್ದರೆ ಚಿನ್ನದ ಸರಕು ವ್ಯಾಪಾರ ಸೂಕ್ತವಲ್ಲ.
ಇದರಲ್ಲಿ ನಷ್ಟದ ಸಾಧ್ಯತೆಗಳಿವೆ.
ಈ
ಮೇಲಿನ ಸ್ಥಾನಗಳಲ್ಲಿ ಚಿನ್ನದ ಸರಕು ವ್ಯಾಪಾರ ನೈಸರ್ಗಿಕವಾಗಿ ಪ್ರಯೋಜನಕಾರಿಯಾಗಿರುವುದಿಲ್ಲ.
ವ್ಯಾಪಾರಿಗಳು ಚಿನ್ನದ ಸರಕು ವ್ಯಾಪಾರ ಮಾಡಬಾರದು. ಆದರೆ ಚಿನ್ನದ ವ್ಯಾಪಾರ
ಸಾಧ್ಯವಿಲ್ಲದಿದ್ದರೂ ಇದರಲ್ಲಿನ ನಷ್ಟ ಕಡಿಮೆ ಮಾಡಲು ಕೆಲವು ಪರಿಹಾರಮಾರ್ಗಗಳಿರುತ್ತದೆ.
- ಎಸ್ ಶರ್ಮ ವಶಿಷ್ಠ
No comments:
Post a Comment