ಮನೆಯಲ್ಲಿ ಮೆಟ್ಟಿಲುಗಳು ಅಥವಾ ಶೌಚಾಲಯ ಪೂರ್ವಮೂಲೆಯಲ್ಲಿದ್ದರೆ ಕುಟುಂಬದ ಸದಸ್ಯರ ಜಾತಕದಲ್ಲಿ ಸೂರ್ಯನ ಸ್ಥಿತಿ ಉತ್ತಮವಾಗಿರುವುದಿಲ್ಲ. ಆಗ ಈ ಕೆಳಗಿನ ಘಟನೆಗಳು ಆಗಬಹುದು.
· ಕುಟುಂಬದ ಹಿರಿಯ(ಪುರುಷ) ವ್ಯಕ್ತಿಯ ಶೀಘ್ರ/ಅಕಾಲಿಕ ಮರಣ ಉಂಟಾಗಬಹುದು.
· ಕುಟುಂಬದಲ್ಲಿನ ಪುರುಷರು ದಿಕ್ಕುತಪ್ಪುತ್ತಾರೆ. ಅವರು ತಮಗೆ ಯೋಗ್ಯವಾದ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದಿಲ್ಲ.
· ಕುಟುಂಬದಲ್ಲಿನ ಪುರುಷರಲ್ಲಿ ಮನಸ್ತಾಪ ಜಗಳಗಳು ಉಂಟಾಗಬಹುದು.
· ವ್ಯಾಪಾರದಲ್ಲಿ ನಷ್ಟ ಅಥವಾ ವ್ಯಾಪಾರವನ್ನು ಮುಚ್ಚಬಹುದು.
· ಆದಾಯ ತೆರಿಗೆ ದಂಡ, ವಿದ್ಯುತ್ ಕಳ್ಳತನ ವ್ಯಾಜ್ಯ, ಕೆಲಸಗಾರರ ವ್ಯಾಜ್ಯ ಮುಂತಾದ ಸರಕಾರೀ ತೊಂದರೆಗಳು ಬರಬಹುದು.
ಕೆಳಗಿನ ಕೆಲವೊಂದು ಪರಿಹಾರೋಪಾಯಗಳಿಂದ ಮನೆಯ ಮೆಟ್ಟಿಲುಗಳು ಅಥವಾ ಶೌಚಾಲಯ ಪೂರ್ವಮೂಲೆಯಲ್ಲಿರುವ ತೊಂದರೆಯಿಂದ ಸ್ವಲ್ಪ ಪರಿಹಾರ ಸಿಗಬಹುದು. ಆದರೆ ಸಂಪೂರ್ಣವಾಗಿ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಿಲ್ಲ.
· ಕುಟುಂಬದ ಎಲ್ಲಾ ಸದಸ್ಯರು ಬೆಳ್ಳಿಯ ಸರ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಬೇಕು.
· ಮನೆಯಲ್ಲಿ ಬೆಳ್ಳಿಯ ಆಭರಣಗಳನ್ನು ಇಡಬೇಕು.
· ಮನೆಯಲ್ಲಿ ಉತ್ತರ ಭಾಗದಲ್ಲಿ 20 ಲೀಟರ್ ಶುದ್ದವಾದ ನೀರನ್ನು ಇಡಬೇಕು.
· ಅಡುಗೆ ಮನೆಯಲ್ಲಿ 20 ಕಿಲೋ ಅಕ್ಕಿಯನ್ನು ಇಡಬೇಕು.
· ಮನೆಯ ಪೂರ್ವ ಭಾಗಕ್ಕೆ ಬಿಳಿ ಅಥವಾ ಕೆಂಪು ಬಣ್ಣ ಹಚ್ಚಬೇಕು.
· ಕುಟುಂಬದ ಎಲ್ಲಾ ಸದಸ್ಯರು ಭಾನುವಾರ ಮತ್ತು ಮಂಗಳವಾರ ಮಾತ್ರ ಸಿಹಿ ಆಹಾರವನ್ನು ಸೇವಿಸಬೇಕು.
· ಹೋಟೆಲುಗಳಿಂದ ಆಹಾರವನ್ನು ಮನೆಗೆ ತರಬಾರದು.
· ಅಡುಗೆ ಮನೆಯಲ್ಲಿಯೇ ಊಟವನ್ನು ಮಾಡಬೇಕು.
· ಕುಟುಂಬದ ಎಲ್ಲಾ ಸದಸ್ಯರು ಸಸ್ಯಾಹಾರಿಗಳಾಗಿರಬೇಕು ಮತ್ತು ಮಧ್ಯಪಾನ ಮಾಡಬಾರದು.
· ಮಲಗುವ ಕೋಣೆಯಲ್ಲಿ ಮತ್ತು ಹಾಸಿಗೆ ಮೇಲೆ ಊಟವನ್ನು ಮಾಡಬಾರದು.
· ಆ ಭಾಗವನ್ನು ಅಚ್ಚುಕಟ್ಟಾಗಿ, ಶುದ್ಧ ಮತ್ತು ಮುಕ್ತವಾಗಿಡಿ.
· ಮೆಟ್ಟಿಲುಗಳ ಕೆಳಗೆ ಕಸದ ಬುಟ್ಟಿ ಮತ್ತು ಉಪಯೋಗವಿಲ್ಲದ ವಸ್ತುಗಳನ್ನು ಇಡಬೇಡಿ.
· ಶೌಚಾಲಯ/ನೆಲ ಸ್ವಚ್ಛಮಾಡುವ ರಾಸಾಯನಿಕಗಳು, ಬಟ್ಟೆ ಒಗೆಯುವ ಹುಡಿ ಮುಂತಾದುವುಗಳನ್ನು ಶೌಚಾಲಯದಲ್ಲಿ ಇಡಬೇಡಿ.
· ಮುಕ್ತವಾಗಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಡಿ.
· ಪ್ರತೀವರ್ಷ ಕುಟುಂಬದ ಎಲ್ಲಾ ಸದಸ್ಯರಿಂದ ಹಣವನ್ನು ಸಂಗ್ರಹಿಸಿ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದನ್ನು ಕುಟುಂಬದ ಎಲ್ಲಾ ಸದಸ್ಯರಿಂದ ಮುಟ್ಟಿಸಿ ನಂತರ ಅವರ ಪರವಾಗಿ ಹರಿಯುವ ನೀರಿನಲ್ಲಿ ಬಿಡಿ. (ಪ್ರತಿಯೊಂದು ಸದಸ್ಯರ ಪರವಾಗಿ ಒಂದೊಂದು ತೆಂಗಿನ ಕಾಯಿಯನ್ನು ನೀರಿನಲ್ಲಿ ಬಿಡಬಹುದು).
· ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ/ವ್ಯಾಪಾರ ಮಾಡಬಾರದು.
· ಇಲೆಕ್ಟ್ರಾನಿಕ್ ಉಪಕರಣಗಳನ್ನು ಉಡುಗೊರೆಯಾಗಿ ಸ್ವೀಕರಿಸಬೇಡಿ (ಮದುವೆಯ ಸಂದರ್ಭದಲ್ಲಿ ಕೂಡ).
· ಹಳೆಯ ಮತ್ತು ಹಾಳಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಮನೆಯಲ್ಲಿ ಇಡಬೇಡಿ.
· ಕುಟುಂಬದ ಎಲ್ಲಾ ಸದಸ್ಯರು ತಮ್ಮ ಜೀವನದ ಎಲ್ಲಾ ಹಂತದಲ್ಲಿ ನೀಲಿಬಣ್ಣದ ಉಪಯೋಗವನ್ನು ತ್ಯಜಿಸಬೇಕು.
- ಎಸ್ ಶರ್ಮ ವಶಿಷ್ಠ
No comments:
Post a Comment