ಮಂತ್ರ ಚಿಕಿಸ್ಥೆಯು ಜ್ಯೋತಿಷ್ಯದ ಪ್ರಭಲ ಪರಿಹಾರಗಳಲ್ಲಿ
ಒಂದಾಗಿದೆ. ಬಹಳ ಜೋತಿಷಿಗಳು ಪರಿಹಾರವಾಗಿ ಬಹಳ ಮಂತ್ರಗಳನ್ನು ಹೇಳಿರುತ್ತಾರೆ. ಉದಾಹರಣೆಗೆ ದಿನಾ
1 ಬಾರಿ/11 ಬಾರಿ/21 ಬಾರಿ ನಿತ್ಯ ಜಪಿಸಲು ಹೇಳಿರುತ್ತಾರೆ. ಅಥವಾ ಕೆಲವು ಮಂತ್ರವನ್ನು ಕೆಲವು
ಗ್ರಹಗಳಿಗಾಗಿ 21000 ಬಾರಿ ಜಪಿಸಲು ಹೇಳಿರುತ್ತಾರೆ. ಈ ಮಂತ್ರದ ಚಿಕಿಸ್ಥೆಯನ್ನು ಜಾತಕದ
ವ್ಯಕ್ತಿಗಳು ಪ್ರಾರಂಬಿಸುತ್ತಾರೆ. ಆದರೆ ಇದನ್ನು ಬಹಳ ಕಾಲ ಮುಂದುವರೆಸುವುದಿಲ್ಲ. ಕೊನೆಯದಾಗಿ
ಅವರು ಈ ಮಂತ್ರ ಚಿಕಿಸ್ಥೆಯಿಂದ ಏನೂ ಪ್ರಯೋಜನವಿಲ್ಲವೆಂದು
ಭಾವಿಸುತ್ತಾರೆ ಮತ್ತು ಜ್ಯೋತಿಷ್ಯ / ಜೋತಿಷಿಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ.
ಈ ರೀತಿಯ ವೈಫಲ್ಯಗಳು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ.
ಅಧ್ಯಯನಗಳ ಪ್ರಕಾರ ಮಂತ್ರ ಚಿಕಿಸ್ಥೆಯು ಬಹಳ ಸರಳ, ಪ್ರಬಲ, ಪರಿಣಾಮಕಾರಿ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಆದರೆ ಮಂತ್ರ ಚಿಕಿಸ್ಥೆಯು ಬಹಳ ಸಮಯ ತೆಗೆದುಕೊಳ್ಳುವದು ಕೂಡ ಆಗಿದೆ.
ಆದರೆ ಮಂತ್ರ ಚಿಕಿಸ್ಥೆಗೆ ಕೆಲವು ಅವಶ್ಯಕತೆಗಳಿವೆ
ಅವು ಈ ಕೆಳಗಿನಂತಿವೆ.
·
ಮಂತ್ರದ ಉಚ್ಛಾರ ನಿಖರವಾಗಿರಬೇಕು.
·
ಪ್ರತಿ ಮಂತ್ರವನ್ನು ನಿರ್ದಿಷ್ಟ ಬಣ್ಣದ ಬಟ್ಟೆ ಧರಿಸಿ ಮಾಡಬೇಕು.
·
ಪ್ರತಿ ಮಂತ್ರವನ್ನು ನಿರ್ದಿಷ್ಟವಾದ ಜಪಮಾಲಾ ಬಳಸಿ ಮಾಡಬೇಕು. ಎಲ್ಲಾ ಮಂತ್ರಗಳನ್ನು ಒಂದೇ ಜಪಮಾಲಾ ಬಳಸಿ
ಮಾಡಬಾರದು.
·
ಪ್ರತಿ ಮಂತ್ರವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕುಳಿತು ಮಾಡಬೇಕು.
·
ಮಂತ್ರ ಆರಂಭಿಸುವ ಸಮಯ ಮತ್ತು ಅಂತ್ಯದ ಕಾಲಮಾನ ಸಮಾನವಾಗಿ ಇರಬೇಕು.
·
ಕೆಲವು ಮಂತ್ರ ಚಿಕಿಸ್ಥೆಗೆ ಬ್ರಹ್ಮಚರ್ಯ ಅಗತ್ಯವಾಗಿದೆ
(ಯಾವುದೇ ದೈಹಿಕ ಸಂಬಂಧ, ಲೈಂಗಿಕ ಆಲೋಚನೆಗಳು ಕೂಡ ಮನಸ್ಸಿಗೆ ಬರಬಾರದು).
·
ನಿರ್ದಿಷ್ಟ ಮಂತ್ರಜಪವನ್ನು ನಿರ್ದಿಷ್ಟವಾದ ದೇವರ ಮೂರ್ತಿಯ ಮುಂದೆ ನಡೆಸಬೇಕು.
·
ಮಂತ್ರದ
ಅರ್ಥ ತಿಳಿದಿರುವುದು ಕೂಡ ಮುಖ್ಯವಾಗಿದೆ.
ಮೇಲಿನವುಗಳು ಮಂತ್ರ ಚಿಕಿಸ್ಥೆಯ
ಕೆಲವು ಅವಶ್ಯಕತೆಗಳು ಸಾಮಾನ್ಯವಾಗಿ ಜನರು ಇದನ್ನು ಅನುಸರಿಸುವುದಿಲ್ಲ. ಇನ್ನೂ ಹೆಚ್ಚು ಹಲವು ಅವಶ್ಯಕತೆಗಳು ಕೂಡ
ಇವೆ.
ನಮ್ಮ ಅನಿಸಿಕೆಯಂತೆ
ಜನರು ಈ ಎಲ್ಲಾ ಅವಶ್ಯಕತೆಗಳನ್ನು ಅನುಸರಿಸಲು ಸಾಧ್ಯವಿಲ್ಲ. ಹಾಗಾಗಿ ಮಂತ್ರ ಚಿಕಿಸ್ಥೆಗೆ
ಸರಳ ವಿಧಾನ ಹೀಗಿದೆ.
·
ನಾವು
ಇಂಟರ್ನೆಟ್/ ಅಂತರ್ಜಾಲದಲ್ಲಿ ಎಲ್ಲಾ ಮಂತ್ರ ಆಪ್(APP) ಗಳನ್ನು ಪಡೆಯಬಹುದು.
·
ಅಗತ್ಯವಿರುವ
ಮಂತ್ರಗಳನ್ನು ನಿಮ್ಮ ಆಂಡ್ರಾಯಿಡ್ ಮೊಬೈಲಿನಲ್ಲಿ
ಹಾಕಿ.
·
ಈಗ ನಿರ್ದಿಷ್ಟ ಅವಧಿಯಲ್ಲಿ ಪ್ರತಿದಿನ ಆ ಮಂತ್ರವನ್ನು ಚಾಲನೆಯಲ್ಲಿಡಿ
ಮತ್ತು ಶಾಂತವಾಗಿ ಕುಳಿತು ಎಚ್ಚರಿಕೆಯಿಂದ ಆಲಿಸಿ.
·
ಶುದ್ದ/ಸ್ವಚ್ಛವಾದ
ಒಂದು ಲೋಟ ನೀರನ್ನು ಆ ಮೊಬೈಲಿನ ಪಕ್ಕದಲ್ಲಿ ಇಡಿ.
·
ಈಗ ಮಂತ್ರದ ಕಂಪನಗಳು ಲೋಟದಲ್ಲಿನ ನೀರಿಗೆ ಶಕ್ತಿ
ತುಂಬುತ್ತದೆ.
·
ಈಗ
ಲೋಟದಲ್ಲಿನ ನೀರು ಶಕ್ತಿಶಾಲಿಯಾದ ನೀರಾಗುತ್ತದೆ.
·
ನಿಮ್ಮ
ಕುಟುಂಬದ ಸದಸ್ಯರಿಗೆ ಈ ನೀರನ್ನು ಕುಡಿಯಲು ಕೊಡಿ ಮತ್ತು ಸ್ವಲ್ಪ ನೀರನ್ನು ಮನೆಗೆ ಮತ್ತು ಮನೆ
ಬಾಗಿಲಿಗೆ ಸಿಂಪಡಿಸಿ.
·
ಈ
ಶಕ್ತಿಶಾಲಿ ನೀರು ನಿಮ್ಮ ಮನೆಯಲ್ಲಿನ ಮತ್ತು ಮನೆಯವರ ಎಲ್ಲಾ ವಾಮಾಚಾರ ಮತ್ತು ಋಣಾತ್ಮಕತೆಯನ್ನು
ತೊಳೆದುಹಾಕುತ್ತದೆ.
ಈ ವಿಧಾನವು ನಿಮಗೆ
ಉಪಯೋಗವಾಗುತ್ತದೆಂದು ಭಾವಿಸುತ್ತೇನೆ. ಇದು ಅತೀ ಕಡಿಮೆ ಬೆಲೆಯ ಮತ್ತು ಅತ್ಯುತ್ತಮವಾದ
ವಿಧಾನವಾಗಿದೆ. ಹೀಗಾಗಿ ಈ ಮಂತ್ರ ಚಿಕಿಸ್ಥೆಯ ವಿಧಾನವನ್ನು
ಅನುಸರಿಸಬಹುದಾಗಿದೆ.- ಎಸ್ ಶರ್ಮ ವಶಿಷ್ಠ
No comments:
Post a Comment