ಹೊಸದಾಗಿ ಮದುವೆಯಾದ ದಂಪತಿಗಳ ನಡುವೆ
ಭಿನ್ನಾಭಿಪ್ರಾಯ ಇಂದು ಬಹಳ ದೊಡ್ಡ ಸಮಸ್ಯೆಯಾಗಿದೆ. ನಾವು ಕಾರಣ ಕಂಡುಹಿಡಿಯಲು ಪ್ರಯತ್ನಿಸಿದಾಗ ಬಹಳ ಬಾರಿ
ಕಾರಣಗಳು ಅರ್ಥಹೀನವಾದದ್ದು ಮತ್ತು ಸುಲಭವಾಗಿ ಬಗೆಹರಿಸುವಂತ್ತಾದ್ದಾಗಿರುತ್ತದೆ. ಆದರೆ
ಕೆಲವೊಮ್ಮೆ ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಗುತ್ತದೆ. ಆಗ ನಾವು ಹಿಂದೂ ಸಂಸ್ಕೃತಿ ಮತ್ತು
ಜ್ಯೋತಿಷ್ಯದ ಮೂಲಕ ನೋಡಿದಾಗ ಇಂತಹ ಸನ್ನಿವೇಶಗಳಿಗೆ ಕಾರಣ ತಿಳಿಯುತ್ತದೆ.
ಸಾಮಾನ್ಯವಾಗಿ ಹೊಸದಾಗಿ ಮದುವೆಯಾದ ಜೋಡಿಗಳು ಕೇಕ್ ಕತ್ತರಿಸಿ ಮೇಣದಬತ್ತಿಗಳನ್ನು ನಂದಿಸುವುದನ್ನು ಕಾಣಬಹುದು. ಈ
ಎರಡೂ ವಿಷಯಗಳಿಗೆ ಹಿಂದೂ ಸಂಸ್ಕೃತಿಯಲ್ಲಿ ಅನುಮತಿಯಿಲ್ಲ.
ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು
ಕಾಯ್ದುಕೊಳ್ಳಲು ಈ ಸರಳ ನಿಯಮಗಳನ್ನು ಅನುಸರಿಸಿ.
1.
ನಾವು ಇಂದಿನ ದಿನಗಳ ಆಚರಣೆಯಲ್ಲಿ ಕೇಕನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಕೇಕನ್ನು ಕತ್ತರಿಸುವ ಬದಲು ನಾವು ಪಾಸ್ತ್ರೀ(Pastries)ಗಳನ್ನು ಕೇಕಿನ ರೀತಿ ಉಪಯೋಗಿಸಬಹುದು, ಇದರಿಂದ ಕತ್ತರಿಸುವ ಅಗತ್ಯ ಇರುವುದಿಲ್ಲ.
2.
ಹಿಂದೂ
ಸಂಸ್ಕೃತಿಯಲ್ಲಿ ನಾವು ಎಲ್ಲಾ ಮಂಗಳಕರವಾದ ಕೆಲಸವನ್ನು ಜ್ಯೋತಿ ಬೆಳಗುವ ಮೂಲಕ
ಪ್ರಾರಂಬಿಸುತ್ತೇವೆ.ಹೀಗಾಗಿ ಮೇಣದಬತ್ತಿಗಳನ್ನು ನಂದಿಸುವುದಕ್ಕೆ ಅನುಮತಿಯಿಲ್ಲ. ನಾವು ನಮ್ಮ ಯಾವುದೇ
ಆಚರಣೆಯ ಆರಂಭದಲ್ಲಿ ಜ್ಯೋತಿಯನ್ನು ಅಥವಾ ಮೇಣದ ಬತ್ತಿಯನ್ನು ಹಚ್ಚಿ ಇಡಬೇಕು.
3.
ಯಾವುದೇ
ಆಚರಣೆ/ ವಿಶೇಷಗಳಲ್ಲಿ ಮಾಂಸಾಹಾರ ಮದ್ಯಪಾನಗಳನ್ನು ನಿಷೇದಿಸಬೇಕು.
4.
ಹೊಸದಾಗಿ
ಮದುವೆಯಾದ ದಂಪತಿಗಳು ಮೊದಲ ವರ್ಷ, ಪ್ರತೀ ತಿಂಗಳು ಮದುವೆಯಾದ
ದಿನದಂದು ಪೋಷಕರಿಂದ ಆಶೀರ್ವಾದ ಪಡೆಯಬೇಕು
ಮತ್ತು ದೇವಾಲಯವನ್ನು ಸಂದರ್ಶಿಸಬೇಕು.(ಇದನ್ನು ಜೀವನ ಪರ್ಯಂತ ಮುಂದುವರೆಸಿದರೆ ಅತ್ಯುತ್ತಮ).
5.
ಪುರುಷರು
ಪತ್ನಿಯೊಂದಿಗೆ ಗೋಶಾಲೆಗೆ ಹೋಗಿ ಹಸುಗಳಿಗೆ ಆಹಾರ ನೀಡಬೇಕು ಮತ್ತು ಗೋಶಾಲೆಗೆ ಹಣದ ದೇಣಿಗೆ
ನೀಡಬೇಕು.ಇದರಿಂದ ಅವನ ಶುಕ್ರ ಗ್ರಹದ ಶಕ್ತಿ ಹೆಚ್ಚುತ್ತದೆ.
6.
ಸ್ತ್ರೀಯರು
ಪತಿಯೊಂದಿಗೆ ದೇವಾಲಯಗಳಿಗೆ ಹೋಗಬೇಕು ಮತ್ತು ಅರಳಿ
ಮರಕ್ಕೆ ನೀರೆರೆಯಬೇಕು. ಇದರಿಂದ
ಅವಳ ಗುರು ಗ್ರಹದ ಶಕ್ತಿ ಹೆಚ್ಚುತ್ತದೆ.
- ಎಸ್ ಶರ್ಮ ವಶಿಷ್ಠ
No comments:
Post a Comment