ಸಾಮಾನ್ಯವಾಗಿ ವ್ಯಕ್ತಿಗಳು
ತಮ್ಮ ಸಮಸ್ಯೆಗಳಿಗೆ ಜಾತಕವನ್ನು ಜ್ಯೋತಿಷಿಗಳ ಬಳಿ
ತೆಗೆದುಕೊಂಡು ಹೋಗುತ್ತಾರೆ. ಪರಿಹಾರಕ್ಕಾಗಿ ಮತ್ತು ರಾಶಿ
ಹರಳುಗಳಿಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಾರೆ ಮತ್ತು ಕೆಲವೊಮ್ಮೆ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ ಗ್ರಹಗಳ ಸಮಸ್ಯೆಗೆ ಸರಳ
ಪರಿಹಾರವಿದೆ. ಪ್ರತಿ
ಗ್ರಹಗಳು ಸಂಬಂಧಿಕರನ್ನು ಪ್ರತಿನಿಧಿಸುತ್ತವೆ. ವ್ಯಕ್ತಿಗಳು
ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಹೊಂದಿದರೆ ನಂತರ ಗ್ರಹಗಳು ಧನಾತ್ಮಕವಾಗುತ್ತವೆ ಮತ್ತು ಇದು
ಗ್ರಹಗಳನ್ನು ಧನಾತ್ಮಕವಾಗಿಸುವ ಅಗ್ಗದ ವಿಧಾನವಾಗಿದೆ. ಆದರೆ ಇಂದಿನ ದಿನಗಳಲ್ಲಿ ಅಹಂಕಾರ ಎಷ್ಟು
ಇದೆಯೆಂದರೆ ಬಹಳಷ್ಟು ವ್ಯಕ್ತಿಗಳು ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಿಲ್ಲ ಮತ್ತು ಈ
ಕಾರಣದಿಂದಲೇ ಬಹಳಷ್ಟು ಹಣ ಖರ್ಚು ಮಾಡಿದ ಮೇಲೂ
ಕೂಡ ಜನರು ಬೇಕಾದ ಫಲಿತಾಂಶ ಪಡೆಯುವುದಿಲ್ಲ.
ಈ ಕೆಳಗಿನ ಸಂಬಂದಿಕರಪಟ್ಟಿ ಮತ್ತು
ಮಾಡಬೇಕಾದ ಕೃತ್ಯಗಳ ಟಿಪ್ಪಣಿಯನ್ನು ನೋಡಿ.
1.
ಗುರು
= ತಾತ
ತಾತನ ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ತಾತನ
ಆಶೀರ್ವಾದವನ್ನು ಪಡೆಯಿರಿ.
ತಾತನು ಬಳಸಿದ ಚಿನ್ನದ ಆಭರಣಗಳನ್ನು
ಧರಿಸಿರಿ.
ಒಟ್ಟಿಗೆ ಭೋಜನ ಮಾಡಿರಿ.
ಯಾವುದೇ
ಮುಖ್ಯವಾದ ಕೆಲಸಕ್ಕೆ ಹೊರಡುವ ಮುನ್ನ ತಾತನ ಆಶೀರ್ವಾದ ಪಡೆಯಿರಿ.
ತಾತನಿಗೆ
ಚಿನ್ನ, ಹಳದಿ/ಕೇಸರಿ ಬಣ್ಣದ ಬಟ್ಟೆಗಳನ್ನು
ಉಡುಗೊರೆ ಕೊಡಿ.
ತಾತನಿಗೆ
ಬಿಸಿ ನೀರಿನ ಬಾಟಲಿ, ಮಸಾಜಿನ ಸಾಮಗ್ರಿಗಳನ್ನು ಉಡುಗೊರೆ
ಕೊಡಿ.
ತಾತನನ್ನು
ಪ್ರೀತಿಯಿಂದ ತಬ್ಬಿಕೊಳ್ಳಿ.
2.
ಸೂರ್ಯ
= ತಂದೆ
ತಂದೆಯ
ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ತಂದೆಯ
ಆಶೀರ್ವಾದವನ್ನು ಪಡೆಯಿರಿ.
ತಂದೆಯು
ಬಳಸಿದ ಚಿನ್ನದ ಆಭರಣಗಳನ್ನು ಧರಿಸಿರಿ.
ಒಟ್ಟಿಗೆ ಭೋಜನ ಮಾಡಿರಿ.
ಯಾವುದೇ
ಮುಖ್ಯವಾದ ಕೆಲಸಕ್ಕೆ ಹೊರಡುವ ಮುನ್ನ ತಂದೆಯ ಆಶೀರ್ವಾದ ಪಡೆಯಿರಿ.
ತಂದೆಗೆ
ಚಿನ್ನ, ಕಿತ್ತಳೆ ಬಣ್ಣದ ಬಟ್ಟೆಗಳನ್ನು
ಉಡುಗೊರೆ ಕೊಡಿ.
ತಂದೆಗೆ
ಬಿಸಿ ನೀರಿನ ಬಾಟಲಿ, ಮಸಾಜಿನ ಸಾಮಗ್ರಿಗಳನ್ನು ಉಡುಗೊರೆ
ಕೊಡಿ.
ತಂದೆಯನ್ನು
ಪ್ರೀತಿಯಿಂದ ತಬ್ಬಿಕೊಳ್ಳಿ.
3.
ಚಂದ್ರ
= ತಾಯಿ
ತಾಯಿಯ
ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ತಾಯಿಯ
ಆಶೀರ್ವಾದವನ್ನು ಪಡೆಯಿರಿ.
ಒಟ್ಟಿಗೆ ಭೋಜನ ಮಾಡಿರಿ.
ಯಾವುದೇ
ಮುಖ್ಯವಾದ ಕೆಲಸಕ್ಕೆ ಹೊರಡುವ ಮುನ್ನ ತಾಯಿಯ ಆಶೀರ್ವಾದ ಪಡೆಯಿರಿ.
ತಾಯಿಗೆ
ಬೆಳ್ಳಿ, ಹಳದಿ ಬಣ್ಣದ ಬಟ್ಟೆ, ಬಾಸುಮತಿ ಅಕ್ಕಿ,ಹಾಲು,ಐಸ್ಕ್ರೀಮ್ ನಂತಹ ಉಪಯೋಗಿಸಿದ ವಸ್ತುಗಳನ್ನು
ಉಡುಗೊರೆ ಕೊಡಿ.
ತಂದೆಯನ್ನು
ಪ್ರೀತಿಯಿಂದ ತಬ್ಬಿಕೊಳ್ಳಿ.
4.
ಶುಕ್ರ
= ಸಂಗಾತಿ (ಪತಿ/ಪತ್ನಿ)
ನಿಮ್ಮ
ಸಂಗಾತಿಯನ್ನು ಸಂತೋಷವಾಗಿರಿಸಿರಿ.
ನಿಮ್ಮ ಸಂಗಾತಿಗೆ ಬಟ್ಟೆ, ಸುಗಂಧದ್ರವ್ಯಗಳು ಮತ್ತು ಹೂಗಳನ್ನು ಉಡುಗೊರೆಯಾಗಿ ಕೊಡಿ.
ನಿಮ್ಮ
ಸಂಗಾತಿಯೊಂದಿಗೆ ಚಿತ್ರಮಂದಿರ / ಗಿರಿಧಾಮಗಳಿಗೆ ಭೇಟಿನೀಡಿ.
ನಿಮ್ಮ
ಸಂಗಾತಿಯೊಂದಿಗೆ ಉಧ್ಯಾನಗಳಿಗೆ ಬೇಟಿನೀಡಿ ಹುಲ್ಲು ಹಾಸಿನ ಮೇಲೆ ನಡೆಯಿರಿ/ ಕುಳಿತುಕೊಳ್ಳಿ.
ನಿಮ್ಮ
ಸಂಗಾತಿಯೊಂದಿಗೆ ಗೋಶಾಲೆಗೆ ಬೇಟಿನೀಡಿ.
5.
ಮಂಗಳ
= ಸಹೋದರ
ಸಹೋದರನ
ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ಸಹೋದರನಿಗೆ
ಸಹಾಯ ನೀಡಲು ಯಾವಾಗಲೂ ಸಿದ್ದರಾಗಿರಿ.
ಸಹೋದರನಿಗೆ
ಸಿಹಿತಿಂಡಿ ಮತ್ತು ಜಾಮ್ ಗಳನ್ನು ನೀಡಿ.
ಕ್ರೀಡಾ
ಸಾಮಗ್ರಿಗಳನ್ನು ಮತ್ತು ಕೆಂಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ.
ಸರಿಯಾದ
ದಿಕ್ಕಿನಲ್ಲಿ ನಿಮ್ಮ ಸಹೋದರನಿಗೆ ಮಾರ್ಗದರ್ಶನ ಮಾಡಿ.
6.
ಬುಧ
= ಸಹೋದರಿ, ತಾಯಿಯ ಸಹೋದರಿ, ತಂದೆಯ ಸಹೋದರಿ
ಅವರ
ಮನೆಗೆ ಬೇಟಿನೀಡುವಾಗ ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗಿ.
ಹಸಿರುಬಣ್ಣದ
ಬಟ್ಟೆ, ಬಳೆಗಳನ್ನು ಉಡುಗೊರೆಯಾಗಿ ನೀಡಿ.
ಅವರೊಂದಿಗೆ
ದುರ್ಗಾದೇವಿಯ ಮಂದಿರವನ್ನು ಸಂದರ್ಶಿಸಿ.
7.
ಶನಿ
= ಮಾವ
ಮಾವನ
ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ಕಪ್ಪು
ಬಣ್ಣದ ಬಟ್ಟೆ, ಬಾದಾಮಿಯನ್ನು ಉಡುಗೊರೆಯಾಗಿ ನೀಡಿ.
ಮದ್ಯಪಾನ/
ಮಾಂಸಾಹಾರವನ್ನು ಮಾವನ ಜೊತೆ ಸೇವಿಸಬೇಡಿ.
ನೀವು
ಉಡುಗೊರೆಯಾಗಿ ಯಾವುದೇ ವಾಹನವನ್ನು ನೀಡಿದರೆ ನಿಮಗೆ ತುಂಬಾ ಪ್ರಯೋಜನ ಆಗುತ್ತದೆ.
8.
ರಾಹು
= ಮಾವ(FATHER-
IN-LAW) , ಅತ್ತೆ(MOTHER
–IN-LAW)
ಅತ್ತೆ
ಮಾವನ ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಿ.
ಅತ್ತೆ
ಮಾವನ ಆಶೀರ್ವಾದವನ್ನು ಪಡೆಯಿರಿ.
ಒಟ್ಟಿಗೆ ಭೋಜನ ಮಾಡಿರಿ.
ನಿಯಮಿತವಾಗಿ ಸಂಗಾತಿಯೊಂದಿಗೆ ಅವರ ಮನೆಗೆ ಹೋಗಿ.
ಅವರ
ಮನೆಯಒಳಗೆ ಹೋಗುವಾಗ ಮತ್ತು ಅಲ್ಲಿಂದ ಹೊರಡುವಾಗ ಅವರ ಆಶೀರ್ವಾದ ಪಡೆಯಿರಿ.
ಅವರಿಗೆ ಬಿಸಿ ನೀರಿನ ಬಾಟಲಿ, ಮಸಾಜಿನ ಸಾಮಗ್ರಿಗಳನ್ನು ಉಡುಗೊರೆ ಕೊಡಿ.
ನೀಲಿ
ಬಣ್ಣದ ಬಟ್ಟೆಗಳನ್ನು ತೊಡದಂತೆ ಅವರನ್ನು ಕೋರಿ.
9.
ಕೇತು
= ಮಗ, ಅಳಿಯ
ಸಾಮಾನ್ಯ
ಕ್ರೀಡಾ ಸಾಮಗ್ರಿಗಳನ್ನು, ಸೈಕಲ್, ಬೈಕ್
ಮುಂತಾದುವನ್ನು ಉಡುಗೊರೆಯಾಗಿ ನೀಡಿ.
ಅವರಿಗೆ
ಕಪ್ಪು / ಬಿಳಿ ಮಿಶ್ರ ಬಣ್ಣದ ಮತ್ತು ಬೂದು ಬಣ್ಣದ ಬಟ್ಟೆ ಹಾಕಲು ಬಿಡಬೇಡಿ.
ನಿಮ್ಮ
ಮಗ/ಅಳಿಯನಿಗೆ ನಾಯಿ ಇಷ್ಟವಾದಲ್ಲಿ ಕಪ್ಪು ಬಣ್ಣದ ನಾಯಿ ಮರಿಯನ್ನು ಉಡುಗೊರೆಯಾಗಿ ಕೊಡಿ.
- ಎಸ್ ಶರ್ಮ ವಶಿಷ್ಠ
No comments:
Post a Comment