Adcode

ಶ್ರೀ ತುಳಸಿ ಪೂಜಾ ವಿಧಾನ


ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
  ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||

|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||

ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ

ಶ್ರೀ ತುಳಸಿ ನಮಸ್ಕಾರ  
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||

ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.


ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.

No comments:

Post a Comment