Adcode

ಹನುಮಾನ್ ಚಾಲೀಸದ ಮಹತ್ವ


ಹನುಮಾನ್ ಚಾಲೀಸವು ಮಹಾಸ್ವಾಮೀ ಗೋಸ್ವಾಮಿ ತುಳಸಿದಾಸರ ಒಂದು ಮಹಾನ್ ಕಾವ್ಯಾತ್ಮಕ ಸಂಯೋಜನೆ. ತುಳಸಿದಾಸರನ್ನು ವಾಲ್ಮೀಕಿ ಮಹರ್ಷಿಯ ಅವತಾರವೆಂದು ಹೇಳಲಾಗುತ್ತದೆ. ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂಧರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗುತ್ತದೆ. ಚಾಲೀಸ ಎಂದರೆ 40, ಹನುಮಾನ್ ಚಾಲೀಸದಲ್ಲಿ 40 ಪದ್ಯಗಳ ಮೂಲಕ ಹನುಮಂತನನ್ನು ವರ್ಣಿಸಲಾಗಿದೆ.  

ತುಳಸಿದಾಸರು ಹೇಳುವಂತೆ ಹನುಮಾನ್ ಚಾಲೀಸವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಹನುಮಾನ್ ಚಾಲೀಸವನ್ನು ಪಠಿಸಲು ವಿಶೇಷವಾದ ಕಾರಣಗಳಿವೆ. ಹನುಮಾನ್ ಚಾಲೀಸದ 40 ಪದ್ಯಗಳನ್ನು 40 ದಿನಗಳು ನಿರಂತರವಾಗಿ ಪಠಿಸಿದರೆ ನಮ್ಮ ಒಂದು ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಮತ್ತು ಅಪಾರ ಪುಣ್ಯ ಸಿಗುತ್ತದೆ. ದಿವ್ಯವಾದ ಹನುಮಾನ್ ಚಾಲೀಸವು ಬಹಳ ಶಕ್ತಿಶಾಲಿಯಾಗಿದೆ.

ಜ್ಯೋತಿಶ್ಶಾಸ್ತ್ರದ ಪ್ರಾಮುಖ್ಯತೆ
ಜ್ಯೋತಿಷ್ಯದ ಪ್ರಕಾರ ಕಂಡ ಅಂಶವೆಂದರೆ, ಶನಿಗ್ರಹದ ಗೊಚಾರದ, ಸಣ್ಣ ಮತ್ತು ದೊಡ್ಡ ಅವಧಿಗಳ ಕೆಟ್ಟ ಪರಿಣಾಮಗಳನ್ನು  ನಿಯಂತ್ರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ. ಶನಿಗ್ರಹದ ಋಣಾತ್ಮಕ ಪ್ರಭಾವದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಪ್ರತೀ ಶನಿವಾರ 8 ಬಾರಿ ಪಠಿಸುವುದರಿಂದ ಉತ್ತಮ ಪರಿಹಾರ ಮತ್ತು ಲಾಭವಾಗುತ್ತದೆ. ಮಂಗಳನ ದೋಷ ಅಥವಾ ಕುಜ ದೋಷವಿರುವವರು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಮಂಗಳನ ಧನಾತ್ಮಕ ಗುಣಗಳಾದ ಶಕ್ತಿ, ಧೈರ್ಯ, ಸಾಹಸ ಮತ್ತು ಅದಮ್ಯ ಚೇತನಗಳನ್ನು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಪಡೆಯಬಹುದು.
ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ.
ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ. ಇದನ್ನು ಬೆಳಿಗ್ಗೆ ಅಥವಾ ಸಂಜೆ  ಪಠಿಸಬಹುದು. ಈ ಸುಂದರವಾದ ಶ್ಲೋಕಗಳನ್ನು ಪಠಿಸಲು ಗರಿಷ್ಠ 10 ನಿಮಿಷಗಳು ಬೇಕಾಗಬಹುದು.
ಪ್ರತಿ ಪದ್ಯ ಅಥವಾ ಚೌಪಾಯಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.
ಎಲ್ಲಾ 40 ಪದ್ಯಗಳನ್ನು ಓದಲು ಆಗದವರು ತಮ್ಮ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು. ಅವುಗಳ ಮಹತ್ವ ಹೀಗಿದೆ.
·         ದುಷ್ಕರ್ಮಗಳನ್ನು ತೆಗೆಯಲು => ಮೊದಲ ಆರಂಭದ ಪದ್ಯ
·         ಬುದ್ದಿವಂತಿಕೆ ಮತ್ತು ಶಕ್ತಿ => ಎರಡನೇ ಆರಂಭದ ಪದ್ಯ
·         ದೈವಿಕ ಜ್ಞಾನವನ್ನು ಹೊಂದಲು => ಮೊದಲ ಪದ್ಯ
·         ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ => 3ನೇ ಪದ್ಯ
·         ಭಕ್ತಿ ಭಾವ ತುಂಬಲು => 7 ಮತ್ತು 8ನೇ ಪದ್ಯ
·         ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆ => 11ನೇ ಪದ್ಯ
·         ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ಮನಸ್ತಾಪ ತೆಗೆದುಹಾಕಲು => 12ನೇ ಪದ್ಯ
·         ಖ್ಯಾತಿ ಪಡೆಯಲು => 13, 15ನೇ ಪದ್ಯಗಳು
·         ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, ಉದ್ಯೋಗದಲ್ಲಿ ಬಡ್ತಿ => 16, 17ನೇ ಪದ್ಯಗಳು
·         ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರ ಕಾರ್ಯವೆಸಗಲು => 20ನೇ ಪದ್ಯ
·         ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆ => 22ನೇ ಪದ್ಯ
·         ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ => 24ನೇ ಪದ್ಯ
·         ಉತ್ತಮ ಆರೋಗ್ಯಕ್ಕಾಗಿ => 25ನೇ ಪದ್ಯ
·         ಬಿಕ್ಕಟ್ಟಿನಿಂದ ವಿಮೋಚನೆಗಾಗಿ => 26ನೇ ಪದ್ಯ
·         ಆಸೆಗಳ ಈಡೇರಿಕೆಗೆ => 27, 28ನೇ ಪದ್ಯಗಳು
·         ಶತ್ರುಗಳ ಮೇಲೆ ವಿಜಯವನ್ನು ಪಡೆಯಲು => 30ನೇ ಪದ್ಯ
·         ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು => 31ನೇ ಪದ್ಯ
·         ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು => 32ರಿಂದ 35ನೇ ಪದ್ಯ
·         ಮಾನಸಿಕ ಶಾಂತಿಗಾಗಿ => 36ನೇ ಪದ್ಯ
·         ಹನುಮನ ಕೃಪೆಗಾಗಿ => 37ನೇ ಪದ್ಯ

ಹನುಮಾನ್ ಚಾಲೀಸಾವನ್ನು ಓದುವುದರ ಪ್ರಯೋಜನಗಳು

ಇದು ದೇಹ ಮತ್ತು ಮನಸ್ಸು ಎರಡರ ಮೇಲೆ ಶುದ್ಧೀಕರಿಸುವ ಪರಿಣಾಮವನ್ನು ಹೊಂದಿದೆ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ. ಇದು ಜೀವನದಲ್ಲಿ ಎಲ್ಲಾ ಅಪಾಯಗಳಿಂದ ಪಾರುಮಾಡುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನ ಗಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ವಿಶ್ವಾಸ ಹೆಚ್ಚುತ್ತದೆ. ಉದ್ಯೋಗ ಸಂದರ್ಶನಗಳಿಗೆ ಹೋಗುವಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಕಾನೂನು ಅವ್ಯವಸ್ಥೆ, ದಾವೆ ಮತ್ತು ಬ೦ಧನಗಳಿಂದ ಮುಕ್ತಿ ಪಡೆಯಲು ಹನುಮಾನ್ ಚಾಲೀಸವನ್ನು 100 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ಹೆಚ್ಚು ಅರ್ಥಪೂರ್ಣವಾಗಿ, ಹನುಮಾನ್ ಚಾಲೀಸವನ್ನು ರಾತ್ರಿ ಪಠಿಸುವುದರಿಂದ ಇದು ಜನರ ಜೀವನದಿಂದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ ಮತ್ತು ತಿಳಿದೂ / ತಿಳಿಯದೆಯೋ ಮಾಡಿದ ಪಾಪಗಳನ್ನು ತೆಗೆದುಹಾಕುತ್ತದೆ. ಮಹಾನ್ ಕಾರ್ಯಗಳನ್ನು  ಸಾಧಿಸಬೇಕಾಗಿರುವವರು ಮಂಗಳವಾರ, ಗುರುವಾರ ಮತ್ತು ಶನಿವಾರದ ಮಂಗಳಕರ ರಾತ್ರಿ ಅಥವಾ ಮೂಲಾ ನಕ್ಷತ್ರದ ದಿನ ಹನುಮಾನ್ ಚಾಲೀಸವನ್ನು 1008 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ರಾತ್ರಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಉತ್ತಮ ಜೀವನದ ಎಲ್ಲಾ ಅಡೆತಡೆಗಳನ್ನು ತೆಗೆದು ಕಾಣಿಸುತ್ತದೆ ಮತ್ತು ಹನುಮಂತನ ರಕ್ಷಣೆ ಮತ್ತು ಕೃಪೆಗೆ ಪಾತ್ರರಾಗುತ್ತಾರೆ.
- ಎಸ್ ಶರ್ಮ ವಶಿಷ್ಠ

No comments:

Post a Comment