Adcode

ವಾಸ್ತು ಮತ್ತು ಸಂಖ್ಯಾಶಾಸ್ತ್ರ


ವಾಸ್ತು ಮತ್ತು ಸಂಖ್ಯಾಶಾಸ್ತ್ರವು ಒಂದಕ್ಕೊಂದು ದಿಕ್ಕುಗಳ ಆಧಾರದ ಮೇಲೆ  ಅವಲಂಬಿಸಿದೆ. ವಾಸ್ತುವಿನಲ್ಲಿನ ಎಲ್ಲ ದಿಕ್ಕುಗಳಿಗೆ ಅದರದ್ದೇ ಆದ ಪ್ರತ್ಯೇಕ ಗ್ರಹಗಳು ಅದಿಪತಿಗಳಿವೆ. ಪ್ರತೀ ಗ್ರಹಕ್ಕೂ ಕೂಡ ಅದರದ್ದೇ ಆದ ಸಂಖ್ಯೆ ಮತ್ತು ಬಣ್ಣಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಕೂಡ ಅದರ ಮಹತ್ವ ಮತ್ತು ಉಪಯೋಗಗಳಿವೆ.

ನಾವು ಯಾವುದೇ ಜಾಗವನ್ನು ಪ್ರವೇಶಿಸುವಾಗ ನಾವು ಆ ಜಾಗದ ಜೈವಿಕ ವಿದ್ಯುತ್ಕಾಂತೀಯ ಅಲೆಗಳ (Bio Electro Magnetic Radiations/Energy) ಶಕ್ತಿಯ ಪ್ರಭಾವಕ್ಕೆ ಒಳಪಡುತ್ತೇವೆ. ಆ ಜಾಗವು ಮನೆ, ಅಂಗಡಿ, ಕಛೇರಿ, ಪೂಜಾ ಕೊಠಡಿ ಅಥವಾ ದೇವಸ್ಥಾನ ಇತ್ಯಾದಿ ಆಗಿರಬಹುದು. ಈ ಶಕ್ತಿಯು ನೇರವಾಗಿ ನಮ್ಮ ಆತ್ಮ, ಮನಸ್ಸು ಮತ್ತು ದೇಹದ ಮೇಲೆ ಪ್ರಭಾವ ಬೀರುತ್ತದೆ. ಈ ಜಾಗದ ಶಕ್ತಿಯು ಧನಾತ್ಮಕವಾದದ್ದಾದರೆ ನಮಗೆ ಶಾಂತ, ಆರಾಮದಾಯಕವಾಗಿರುತ್ತದೆ ಮತ್ತು ಉಸಿರಾಟದ ಗತಿ ನಿಧಾನವಾಗುತ್ತದೆ. ಈ ಜಾಗದ ಶಕ್ತಿಯು ಋಣಾತ್ಮಕವಾದದ್ದಾದರೆ ಕೂಡಲೇ ನಮ್ಮ ಉಸಿರಾಟದ ಗತಿ ವೇಗವಾಗುತ್ತದೆ. ನಮಗೆ ಆತಂಕದ ಮನಃಸ್ತಿತಿ ಉಂಟಾಗುತ್ತದೆ. ಅಂತಿಮವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ಆಸ್ತಿ, ಆರೋಗ್ಯ ಮತ್ತು ಸಂತೋಷದ ಹಾನಿಯುಂಟಾಗುತ್ತದೆ. ಜೀವನದಲ್ಲಿನ ಈ ಎಲ್ಲಾ ಋಣಾತ್ಮಕವಾದ ಪರಿಣಾಮಗಳಿಂದ ಮುಕ್ತಿಹೊಂದಲು ಹೊಸ ಮನೆ, ಜಾಗ, ಕಛೇರಿ ಇತ್ಯಾದಿಗಳನ್ನು ಕೊಳ್ಳುವಾಗ ವಾಸ್ತುವಿನ ತತ್ವಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.ಇದರಿಂದ ಶಾಂತಿಯುತ ಸಂತೋಷದ ಜೀವನವನ್ನು ಆನಂದಿಸಲು ಅವಕಾಶ ಹೆಚ್ಚಾಗುತ್ತದೆ.
 
ನಮ್ಮ ಸ್ವಂತ ಹಣೆಬರಹ ಸಂಖ್ಯೆ ಮತ್ತು ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವ ವಿಧಾನದಿಂದ ನಾವು ಸರಿಯಾದ ಮಾರ್ಗದಲ್ಲಿ ಸಾಗಬಹುದು.ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕ ತಿಳಿದಿರುತ್ತದೆ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 12 ಆಗಿದ್ದರೆ ಅದನ್ನು ಕೂಡಿಸಿ ಒಂದು ಸಂಖ್ಯೆ ಮಾಡಿ = 1+2=3. ಈಗ ತಿಂಗಳು ವರ್ಷ ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 12 ಮಾರ್ಚ್ 1990 ಆಗಿದ್ದರೆ ಅವುಗಳನ್ನು ಕೂಡಿಸಿ ಒಂದೇ ಸಂಖ್ಯೆಯಾಗಿ ಮಾಡಿ. 1+2+3+1+9+9+೦=25=7.ಹೀಗೆ ಜನ್ಮ ದಿನಾಂಕವನ್ನು ಕೂಡಿಸುವುದರಿಂದ ಎರಡು ವಿಧವಾದ ಸಂಖ್ಯೆಗಳು ಸಿಗುತ್ತವೆ, ಅವು ಹಣೆಬರಹ ಸಂಖ್ಯೆ ಮತ್ತು ಅದೃಷ್ಟ ಸಂಖ್ಯೆ.
ಇಲ್ಲಿ           ಅದೃಷ್ಟ ಸಂಖ್ಯೆ(Lucky number) = 3            
               ಹಣೆಬರಹ ಸಂಖ್ಯೆ(Destiny number) = 7.
 
ಈಗ, ಕೆಳಗಿನ ಕೋಷ್ಟಕದ ಸಹಾಯದಿಂದ ನಮ್ಮ ಅದೃಷ್ಟ ಸಂಖ್ಯೆ ಮತ್ತು ಹಣೆಬರಹ ಸಂಖ್ಯೆಗಳನ್ನು ಎಂಟು ದಿಕ್ಕು ಮತ್ತು ಅದರ ಆಡಳಿತ ಸಂಖ್ಯೆ(Ruling Number) ಗಳ ಜೊತೆಗಿನ ಸಂಬಂಧವನ್ನು ನೋಡೋಣ.

ದಿಕ್ಕು
ಗ್ರಹ
ಸಂಖ್ಯೆ
ಪೂರ್ವ
ಸೂರ್ಯ
1
ಉತ್ತರ
ಬುಧ
5
ದಕ್ಷಿಣ
ಮಂಗಳ
9
ಪಶ್ಚಿಮ
ಶನಿ
8
ಈಶಾನ್ಯ
ಗುರು
ಕೇತು
3

7
ಆಗ್ನೇಯ
ಶುಕ್ರ
6
ವಾಯುವ್ಯ
ಚಂದ್ರ
2
ನೈಋತ್ಯ
ರಾಹು
4
- ಎಸ್ ಶರ್ಮ ವಶಿಷ್ಠ.

No comments:

Post a Comment