Adcode

ಜ್ಯೋತಿಷ್ಯ ವಾಸ್ತು ಮತ್ತು ಗಡಿಯಾರ


1. ಯಾವಾಗಲೂ ಉತ್ತರ ದಿಕ್ಕಿನ ಗೋಡೆಯಲ್ಲಿ  ಗಡಿಯಾರವನ್ನಿಡಿ. ಏಕೆಂದರೆ ಗಡಿಯಾರ ಮತ್ತು ಉತ್ತರ ಗೋಡೆ ಎರಡೂ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಇದು ಸೂಕ್ತವಾಗಿದೆ.
 
2. ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಎಂದಿಗೂ ಗಡಿಯಾರ ಇರಿಸಬೇಡಿ. ಏಕೆಂದರೆ ದಕ್ಷಿಣಗೋಡೆ ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ ಗಡಿಯಾರ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ, ಮಂಗಳ ಮತ್ತು ಬುಧ ಗ್ರಹರು ಪರಸ್ಪರ ಶತೃಗ್ರಹಗಳಾಗಿವೆ.
 
3. ಯಾವಾಗಲೂ ವೃತ್ತಾಕಾರವಾದ ಗಡಿಯಾರವನ್ನೇ ಬಳಸಿ.ವೃತ್ತಾಕಾರ ಬುಧನನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಇದು ಸೂಕ್ತವಾಗಿರುತ್ತದೆ. ಎಂದಿಗೂ ಚೌಕಾಕಾರದ ಗಡಿಯಾರವನ್ನು ಉಪಯೋಗಿಸಬೇಡಿ ಏಕೆಂದರೆ ಅದು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ.
 
4. ಮುನ್ನೆಚ್ಚರಿಕೆಯಾಗಿ ನೀವು ಉಡುಗೊರೆಯಾಗಿ ಗಡಿಯಾರವನ್ನು  ಎಂದೆಂದಿಗೂ ತೆಗೆದುಕೊಳ್ಳಲೇಬಾರದು. ಏಕೆಂದರೆ ಬಹಳ ಸಂದರ್ಭಗಳಲ್ಲಿ ಗಡಿಯಾರವನ್ನು ಉಡುಗೊರೆಯಾಗಿ ಪಡೆದಾಗ ಅದು ಚೌಕಾಕಾರದ್ದಾಗಿರುತ್ತದೆ. ಇದು ನಿಮಗೆ ದುರಾದೃಷ್ಟ ತರುವುದು. ಮೊದಲನೆಯದಾಗಿ ನಾವು ಉಚಿತವಾಗಿ ಯಾವುದೇ ವಸ್ತುಗಳನ್ನು ಸ್ವೀಕರಿಸಬಾರದು. ನಾವು ಉಚಿತವಾಗಿ ಏನಾದರೂ ವಸ್ತುವನ್ನು  ಸ್ವೀಕರಿಸಿದರೆ ಸೂರ್ಯ ಗ್ರಹ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
 
5. ಒಂದು ವೇಳೆ ಯಾರಿಂದಾದರೂ ಉಡುಗೊರೆಯನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅವರಿಗೆ ಸಣ್ಣ ಪ್ರಮಾಣದ ಹಣವನ್ನು ಹಿಂತಿರುಗಿಸಿ. ನೀವು ಗಡಿಯಾರವನ್ನು ಉಡುಗೊರೆಯಾಗಿ ಪಡೆಯಬಹುದೇ ಬೇಡವೇ ಎಂಬುದು ನಿಮ್ಮ ಸ್ವಂತ ಜನ್ಮ ಕುಂಡಲಿಯ ಮೇಲೆ ಅವಲಂಬಿಸಿದೆ. 
 
6. ಒಂದು ವೇಳೆ ನಿಮ್ಮ ಉದ್ಯೋಗ ಬುಧ ಗ್ರಹಕ್ಕೆ ಸಂಬಂದಿಸಿದ ಮಾತುಗಾರಿಕೆ/ಭಾಷಣ, ಮಾರ್ಕೆಟಿಂಗ್, ಷೇರು ಮಾರುಕಟ್ಟೆ, ಹಣಕಾಸು, ಲೇವಾದೇವಿ ವ್ಯಾಪಾರ ಆಗಿದ್ದಲ್ಲಿ ಮೇಲಿನ ವಿಷಯಗಳು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಬಲ್ಲವು.
- ಎಸ್ ಶರ್ಮ ವಶಿಷ್ಠ

No comments:

Post a Comment