Adcode

ವ್ಯಕ್ತಿತ್ವ ನಿರ್ಣಯ ಕಲೆ


ನಾವು ಅನೇಕ ವಿಧಾನಗಳಿಂದ ಮಾನವನ ಸ್ವಭಾವದ ನಿರ್ಣಯ ಮಾಡಬಹುದು. ಕೆಲವು ಜನಪ್ರಿಯ ವಿಧಾನಗಳು ಹೀಗೆ ಇವೆ.
ಜ್ಯೋತಿಷ್ಯ
ಹಸ್ತ ಸಾಮುದ್ರಿಕೆ
ದೇಹ ಭಾಷೆ
ಮುಖ ಓದುವಿಕೆ
ಹಣೆಬರಹ ಓದುವಿಕೆ
ಹೆಬ್ಬೆರಳ ರೇಖೆಗಳು
ಕಾಫಿ ಕಪ್ ಓದುವಿಕೆ
ಮನಶಾಸ್ತ್ರ
ಈಗ ನಾವು ವಿದ್ಯಾರ್ಥಿಗಳ ವರ್ತನೆಯನ್ನು ಮತ್ತು ವ್ಯಕ್ತಿತ್ವವನ್ನು ನಿರ್ಣಯಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ನೋಡೋಣ.

ನಮಗೆ ತಿಳಿದಿರುವಂತೆ ವಿದ್ಯಾರ್ಥಿಗಳು ತಮ್ಮ ಸಮಯ ಸಿಕ್ಕಾಗ ತಮ್ಮ ಟಿಪ್ಪಣಿ ಪುಸ್ತಕದ ಕೊನೇ ಹಾಳೆಯಲ್ಲಿ ಏನನ್ನಾದರೂ ಬರೆಯುತ್ತಾರೆ. ನಾವು ಈ ಕೊನೆಯ ಪುಟ ಓದುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಿರ್ಣಯ ಮಾಡಬಹುದು ಮತ್ತು ಇದು ಪೋಷಕರಿಗೆ ಬಹಳ ಸಹಾಯಕವಾಗಿದೆ.
ಮಕ್ಕಳ ಬಗ್ಗೆ ತಿಳಿಯಲು ಮತ್ತು ಅವರ ಅನಿಸಿಕೆಗಳನ್ನು ತಿಳಿಯಲು ಕೊನೆಯ ಪುಟದಲ್ಲಿನ ಅಂಶಗಳನ್ನು ನೋಡಬೇಕು.

·         ಹೂವಿನ ಚಿತ್ರ ಬಿಡಿಸಿದ್ದರೆ ಮೃದು ಹೃದಯ ಎಂದರ್ಥ. ಸಾಮಾನ್ಯವಾಗಿ ಹುಡುಗಿಯರು ಹೂವಿನ ಚಿತ್ರ ಬಿಡಿಸುತ್ತಾರೆ. ಇಂತಹ ವಿದ್ಯಾರ್ಥಿಗಳು ವಿನ್ಯಾಸ(Design) ಕೆಲಸದಲ್ಲಿ ಉತ್ತಮವಾಗಿರುತ್ತಾರೆ.ವಾಸ್ತುಶಿಲ್ಪ,ಫ್ಯಾಷನ್ ವಿನ್ಯಾಸ, ಗೃಹಾಲಂಕರಣ(Interior decoration) ಇತ್ಯಾದಿ.

·         ಅರ್ಥಹೀನ ರೇಖೆಗಳನ್ನು ಬಿಡಿಸಿದ್ದರೆ ಜೀವನದಲ್ಲಿ ಯಾವುದೇ ಗುರಿ ಇಲ್ಲ ಎಂದು ಅರ್ಥ. ಇಂತಹ ವಿಧ್ಯಾರ್ಥಿಗಳಿಗೆ ಪಾಲಕರು ತಮ್ಮ ಗುರಿಯ ಬಗ್ಗೆ ಪ್ರೇರೇಪಣೆ ನೀಡಬೇಕು.

·         ತಮ್ಮ ಹೆಸರು ಬರೆದಿದ್ದರೆ ಇವರು ಮಹತ್ವಾಕಾಂಕ್ಷೆಯವರಾಗಿರುತ್ತಾರೆ. ಸಾಮಾನ್ಯವಾಗಿ ಹುಡುಗರು ತಮ್ಮ ಹೆಸರನ್ನು ಬರೆದಿರುತ್ತಾರೆ. ಅಂತಹ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಉದ್ಯಮಿ / ರಾಜಕಾರಣಿ ಆಗುತ್ತಾರೆ. ಇವರು ಜೀವನದಲ್ಲಿ ಯಶಸ್ವಿಯಾಗಿ ಹೆಸರು ಮತ್ತು ಖ್ಯಾತಿ ಪಡೆಯುತ್ತಾರೆ.
 
·         ಬಾಣಗಳನ್ನು ಬಿಡಿಸಿದ್ದರೆ ವಿದ್ಯಾರ್ಥಿಯು ತನ್ನ ಗುರಿ ತಿಳಿದಿರುವನು ಮತ್ತು ಗುರಿ ಸಾಧಿಸಲು ಕಠಿಣ ಪರಿಶ್ರಮ ಪಡುತ್ತಾನೆ ಎಂದು ಅರ್ಥ. ಇಂತಹ ವಿದ್ಯಾರ್ಥಿಗಳು ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಅಂತಹ ವಿದ್ಯಾರ್ಥಿಗಳು ಉನ್ನತ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ. ಇಂತಹ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಅಧಿಕಾರಿಗಳಾಗುತ್ತಾರೆ.
 
·         ವ್ರತ್ತಾಕಾರಗಳನ್ನು ಬಿಡಿಸಿದ್ದಾರೆ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅರ್ಥ. ಇಂತಹ ವಿದ್ಯಾರ್ಥಿಗಳಿಗೆ ಜೀವನದ ಉದ್ದೇಶವು ಗೊತ್ತಿರುವುದಿಲ್ಲ. ಅವರಲ್ಲಿ ಋಣಾತ್ಮಕ ಶಕ್ತಿ ತುಂಬಿರುತ್ತವೆ.ಇದಕ್ಕೆ ದೇಶೀಯ ವಾತಾವರಣ ಕಾರಣವಾಗುತ್ತದೆ. ಪಾಲಕರು ಯಾವಾಗಲೂ  ಸ್ನೇಹಪೂರ್ವಕವಾಗಿ ಇವರೊಂದಿಗೆ ಸಮಯ ಕಳೆಯಬೇಕು ಮತ್ತು ಆಗಾಗ ಉತ್ತಮವಾದ ಚರ್ಚೆಗಳನ್ನು ಮಾಡಬೇಕು. ಇಂತಹ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಸಹ ಅಗತ್ಯವಿದೆ.
 
·         ಮರ, ಬೆಟ್ಟ, ಒಂಟಿ ಮರ ಮುಂತಾದ ಪ್ರಕೃತಿಯ ಚಿತ್ರ ಬಿಡಿಸಿದ್ದರೆ ಅವರು ಒಂಟಿಯಾಗಿ ಇರಲು ಇಷ್ಟಪಡುತ್ತಾರೆ. ಅವರು ಪ್ರಕೃತಿಯಲ್ಲಿ ಅಂತರ್ಮುಖಿಯಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಕಾಳಜಿ ವಹಿಸುವ ಮತ್ತು ಪ್ರೀತಿಯಿಂದ ನೋಡುವ ವ್ಯಕ್ತಿಯ ಸಾಂಗತ್ಯ ಅಗತ್ಯವಿದೆ. 
            ಪಾಲಕರು ಇಂತಹ ವಿದ್ಯಾರ್ಥಿಗಳ ಜೊತೆ  ಒಟ್ಟಿಗೆ ಭೋಜನ, ಕುಟುಂಬ ಪ್ರವಾಸ ಹೀಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ಪೋಷಕರು ಇಂತಹ ಸಂದರ್ಭಗಳಲ್ಲಿ ಬಂದು ಸೇರಲು ಅಂತಹ ವಿದ್ಯಾರ್ಥಿಗಳನ್ನು ಒತ್ತಾಯಿಸಬೇಕು. ಕೆಲವು ಅಪರಿಚಿತ ಸಂಬಂಧಿ ಅಥವಾ ಕುಟುಂಬ ಸ್ನೇಹಿತರು ಮನೆಗೆ ಭೇಟಿನೀಡಿದಾಗ  ಅಂತಹ ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಾರೆ. ಇಂತಹ ವಿದ್ಯಾರ್ಥಿಗಳು ಸಂಶೋಧನಾ ವಿದ್ವಾಂಸ / ವಿಜ್ಞಾನಿ / ಪ್ರೋಗ್ರಾಮರ್ ಆಗುತ್ತಾರೆ.
 
·         ಮೂಗು, ತುಟಿ, ಕಣ್ಣುಗಳು ಇಲ್ಲದೇ ಮುಖದ ಹೊರಗಿನ ರೇಖೆಯನ್ನು ಬಿಡಿಸಿದ್ದರೆ, ಸಾಮಾನ್ಯವಾಗಿ ಯುವತಿಯರು ಇಂತಹ ಚಿತ್ರ ಬಿಡಿಸಿದ್ದರೆ ಅವರು ರಾಜಕುಮಾರನಿಗೆ  ಕಾಯುತ್ತಿರುವರು ಎಂದು ಅರ್ಥ. ಈ  ಅವಧಿಯಲ್ಲಿ ಪೋಷಕರು ವಿಶೇಷವಾಗಿ ತಾಯಂದಿರು ಹುಡುಗಿಯರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ಇದರಿಂದ ಆ ಹುಡುಗಿ ತನ್ನ ಪ್ರತಿ ಸಮಸ್ಯೆ ಮತ್ತು ಅವಳ ಪ್ರಶ್ನೆಗಳನ್ನು ಹಂಚಿಕೊಳ್ಳಲು ಸುಲಭವಾಗುತ್ತದೆ.
 
ನಾನು ನಿನ್ನನ್ನು ಪ್ರೀತಿಸುವೆ (ILOVEU), ಸಾಮಾನ್ಯವಾಗಿ ಹುಡುಗರು ಇಂತಹ ಸಾಲುಗಳನ್ನು ಬರೆಯುತ್ತಿದ್ದಾರೆ ಎಂದರೆ ಅವರು ಯುವಕರಾಗುತ್ತಿದ್ದಾರೆ ಎಂದು ಅರ್ಥ.
- ಎಸ್ ಶರ್ಮ ವಶಿಷ್ಠ

No comments:

Post a Comment